ಯುನೈಟೆಡ್ ಕಿಂಗ್ಡಮ್ನಲ್ಲಿ ಗಾಢ ಮಂಜು ಕಾರಣದಿಂದ ವಿಮಾನ ಸಂಚಾರದಲ್ಲಿ ಗಂಭೀರ ಅಡಚಣೆ ಉಂಟಾಗಿದೆ. ಹಲವಾರು ವಿಮಾನಗಳು ವಿಳಂಬಗೊಂಡಿವೆ, ಕೆಲವು ವಿಮಾನಗಳು ರದ್ದಾಗಿದ್ದು, ಕೆಲವು ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಪ್ರಯಾಣಿಕರು ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ. UK ಯ ಪ್ರಮುಖ ಏರ್ ಟ್ರಾಫಿಕ್ ಕಂಟ್ರೋಲ್ ಪ್ರೊವೈಡರ್ ಇಲಾಖೆ ನ್ಯಾಷನಲ್ ಏರ್ ಟ್ರಾಫಿಕ್ ಸರ್ವಿಸಸ್ (NATS) ಹಾಗು ಹವಾಮಾನ ತಜ್ಞರ ಪ್ರಕಾರ , ಇಂಗ್ಲೆಂಡ್ ಮತ್ತು ವೇಲ್ಸ್ ನ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜಿನ ತೀವ್ರತೆ ಇನ್ನು ಕೆಲವು ದಿವಸಗಳು ಸಹ ಇರುವ ಸಾಧ್ಯತೆಯನ್ನು ಕಾಣುತ್ತಾರೆ. ಪ್ರಯಾಣಿಕರಿಗೆ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಸಲಹೆ ನೀಡಲಾಗಿದ್ದು, ರಸ್ತೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ.
ವಿಮಾನ ವಿಳಂಬದಿಂದ ಗ್ಯಾಟ್ವಿಕ್ ಹಾಗು ಹೀಥ್ರು , ಮ್ಯಾಂಚೆಸ್ಟರ್, ಕಾರ್ಡಿಫ್ ವಿಮಾನ ನಿಲ್ದಾಣದಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿದ್ದು ಸಾವಿರಾರು ಜನರು ತಮ್ಮ ವಿಮಾನಕ್ಕಾಗಿ ಕಾಯುತ್ತಿದ್ದು, ಎಲ್ಲಿಯೂ ಕುಳಿತುಕೊಳ್ಳಲು ಕೂಡ ಅವಕಾಶವಿಲ್ಲ, ಟರ್ಮಿನಲ್ನಲ್ಲಿ ಸಾಕಷ್ಟು ಆಹಾರ ಲಭ್ಯವಿಲ್ಲ, ಶೌಚಾಲಯವನ್ನು ಬಳಸಲು ಗಂಟೆಗಟ್ಟಲು ಕಾಯಬೇಕಾದ ಪರಿಸ್ಥಿತಿಗಳು ಎದುರಾಗುತ್ತಿವೆ ಎಂದು ಪ್ರಯಾಣಿಕರು ತಮ್ಮ ಕಷ್ಟವನ್ನು ವ್ಯಕ್ತಪಡಿಸುತ್ತಿದ್ದಾರೆ. ಟೀಸೈಡ್ ವಿಮಾನ ನಿಲ್ದಾಣದಲ್ಲಿ ಭಾರೀ ಮಂಜು ಆವರಿಸಿದ್ದರಿಂದ ಕೆಲವೊಂದು ವಿಮಾನಗಳನ್ನು ಐರ್ಲೆಂಡ್ನ ಡಬ್ಲಿನ್ನಲ್ಲಿ ತಿರುಗಿ ಇಳಿಸಲಾಗುತ್ತಿದೆ.
ಯುಕೆ ಕಿಂಗ್ಡಮ್ನಲ್ಲಿ ವಾಸಿಸುವ ಕನ್ನಡಿಗರು, ವಿಶೇಷವಾಗಿ ಹಬ್ಬದ ಸಮಯದಲ್ಲಿ ಭಾರತಕ್ಕೆ ಪ್ರಯಾಣಿಸುವವರು ಮತ್ತು ಭಾರತದಿಂದ ವಾಪಾಸ್ ಯುಕೆ ಅಥವಾ ಯುರೋಪ್ ದೇಶಕ್ಕೆ ಮರಳುವವರು ಯಾವುದೇ ಯೋಚಿಸದ ಬದಲಾವಣೆಗಳಿಗೆ ಸಿದ್ಧರಾಗಿರಿ ಮತ್ತು ಬ್ಯಾಕಪ್ ಯೋಜನೆಯನ್ನು ಹೊಂದಿರಿ. ಯುಕೆಯ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಮಾಹಿತಿಯನ್ನು ನೀಡಲು ಹಾಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಇದರ ಸದುಪಯೋಗ ಪ್ರಯಾಣಿಕರು ಪಡೆಯಬಹುದು