ಭಾರತೀಯ ರೂಪಾಯಿ ಡಾಲರ್ ಎದುರು ಇತಿಹಾಸದ ಅತ್ಯಂತ ಕೀಳಗಿನ ಮಟ್ಟ ತಲುಪಿದ್ದು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸವಾಲಿನಂತಾಗಿಸಿದೆ. 3.75 ಬಿಲಿಯನ್ ಡಾಲರ್‌ಗಳ ಬಾಂಡ್ ಹರಾಜು ಮತ್ತು ಭಾರತೀಯ ಬಾಂಡ್ ಇಎಲ್ಡ್ ದರ ಹೆಚ್ಚಳದ ನಡುವೆ ರೂಪಾಯಿ ಡಾಲರ್‌ಗೆ 85.73 ರ ಕನಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕ , ಯುರೋಪ್, ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಅಸ್ಥಿರತೆಯ ಭೀತಿ ಹೆಚ್ಚಾಗಿದ್ದು ,ಇದರಿಂದಾಗಿ ಹೂಡಿಕೆದಾರರು ಸುರಕ್ಷಿತ ಆಯ್ಕೆಯಾಗಿ ಡಾಲರ್‌ನತ್ತ ಮುಖ ಮಾಡುತ್ತಿದ್ದಾರೆ
ವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (FPIs) ಭಾರತದ ಷೇರು ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂದಕ್ಕೆ ಪಡೆಯುತ್ತಿರುವುದು ಕೂಡ ರೂಪಾಯಿ ಕುಸಿತಕ್ಕೆ ಕಾರಣ ಅಂತ ಹೇಳಲಾಗುತ್ತಿದೆ
ರೂಪಾಯಿ ಮೌಲ್ಯ ಕುಸಿತದಿಂದ ವಿದೇಶಿ ಕೆಲಸಗಾರರಿಗೆ ಹೆಚ್ಚಿನ ಆದಾಯ
ವಿದೇಶದಲ್ಲಿ ಕೆಲಸ ಮಾಡುತ್ತಿರುವ NRI-ಗಳು ತಮ್ಮ ಕುಟುಂಬಗಳಿಗೆ ಅಥವಾ ಹೂಡಿಕೆಗಳಿಗೆ ಭಾರತಕ್ಕೆ ಹಣ ಕಳುಹಿಸಿದಾಗ, ಪ್ರತಿ ಡಾಲರ್ ಅಥವಾ ಇತರ ವಿದೇಶಿ ಕರೆನ್ಸಿಯೂ ಹೆಚ್ಚು ರೂಪಾಯಿ ನೀಡಬಹುದು
ಭಾರತೀಯ ಆಸ್ತಿ ಹೂಡಿಕೆಗಳಿಗೆ ಒಳ್ಳೆಯ ಕಾಲ
ರೂಪಾಯಿ ಕುಸಿತದ ಸಮಯದಲ್ಲಿ ಭಾರತೀಯ ಆಸ್ತಿ (ಪ್ರಾಪರ್ಟಿ, ಶೇರುಗಳು, ಬಾಂಡ್‌ಗಳು) ಕಡಿಮೆ ವಿದೇಶಿ ಹಣ ವಿನಿಮಯದೊಂದಿಗೆ ಖರೀದಿಸಬಹುದು
ಲಾಭದಾಯಕ ಬಡ್ಡಿ ದರಗಳು
ರೂಪಾಯಿ ಕುಸಿತದ ಸಂದರ್ಭದಲ್ಲಿ NRE ಮತ್ತು NRO ಖಾತೆಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭದಾಯಕ ಬಡ್ಡಿ ದರಗಳು ಲಭ್ಯವಾಗುತ್ತವೆ.
ಯುಕೆ ಪೌಂಡ್ (GBP) ಭಾರತೀಯ ರೂಪಾಯಿ (INR) ಗೆ ವಿನಿಮಯ ದರವು 108.10 ಏರಿಕೆಯಾಗಿದೆ. ವಿನಿಮಯ ದರಗಳು ತ್ವರಿತವಾಗಿ ಬದಲಾಗಬಹುದು, ಆದ್ದರಿಂದ ಕರೆನ್ಸಿ ಪರಿವರ್ತನೆಯನ್ನು ಒಳಗೊಂಡಿರುವ ಯಾವುದೇ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತ.