Author: admin
ಆಸ್ಟ್ರೇಲಿಯಾ ಸರ್ಕಾರವು ಭಾರತೀಯ ಯುವ ಉದ್ಯೋಗಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಲು ಮೇಟ್ಸ್ (Mobility Arrangement for Talented Early-professionals Scheme – MATES) ವೀಸಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ 2024ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು ಜನವರಿ 07 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಪ್ರತಿ ವರ್ಷ 3,000 ಭಾರತೀಯ ಯುವ ಉದ್ಯೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ. ಮೇಟ್ಸ್ ವೀಸಾದ ಮುಖ್ಯ ಅರ್ಹತಾ ಮಾನದಂಡಗಳುವಯೋಮಿತಿ: 18 ರಿಂದ 30 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬಹುದು.ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಪಡೆದಿರಬೇಕು.ಈ ವೀಸಾ Renewable energy,Agriculture, Information and communication technology (ICT), Engineering, Health, Education,Financial technology, Artificial intelligence, Mining ಯಾವುದಾದರು ಕ್ಷೇತ್ರಗಳಲ್ಲಿ ಪದವಿ ಪಡೆದಿರಬೇಕು.ಭಾಷಾ ಪರಿಣಿತಿ: ಅರ್ಜಿದಾರರು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು. IELTS ಪರೀಕ್ಷೆಯಲ್ಲಿ ಒಟ್ಟು 6 ಅಂಕಗಳು ಮತ್ತು ಪ್ರತಿ ವಿಭಾಗದಲ್ಲಿ ಕನಿಷ್ಠ…
ಯುನೈಟೆಡ್ ಕಿಂಗ್ಡಮ್ (UK) ಇಮಿಗ್ರೇಶನ್ ನಿಯಮಗಳಲ್ಲಿ ಡಿಸೆಂಬರ್ 31, 2024 ರಿಂದ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. 2024 ಡಿಸೆಂಬರ್ 31 ನಂತರ, ಬಯೋಮೆಟ್ರಿಕ್ ರೆಸಿಡೆನ್ಸ್ ಕಾರ್ಡ್‌ಗಳು (BRP) ಮತ್ತು ಬಯೋಮೆಟ್ರಿಕ್ ಪರ್ಮಿಟ್‌ಗಳು (BRC) ಅಧಿಕಾರದಲ್ಲಿರುವುದಿಲ್ಲ. ಬದಲಿಗೆ, ಇ-ವೀಸಾ (eVisa) ಎಂಬ ಡಿಜಿಟಲ್ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಇ-ವೀಸಾ ಇಮಿಗ್ರೇಶನ್ ಸ್ಥಿತಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಲು ಮತ್ತು ತೋರಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಕ್ಕೆ ಇ-ವೀಸಾ ಅಗತ್ಯ ಡಿಸೆಂಬರ್ 31, 2024 ನಂತರ, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಇ-ವೀಸಾವನ್ನು ಬಳಸಬೇಕಾಗುತ್ತದೆ. BRP ಅವಧಿ ಮುಗಿಯುವ ಮೊದಲು ಹೊಸ ವ್ಯವಸ್ಥೆಗೆ ಬದಲಾವಣೆ ಮಾಡುವುದು ಅಗತ್ಯವಿದೆ. ಯುಕೆ ಸರ್ಕಾರವು ಇ-ವೀಸಾಗಳಿಗೆ ಪರಿವರ್ತನೆಯನ್ನು ಸುಗಮಗೊಳಿಸಲು 2025 ರ ಮಾರ್ಚ್ 31 ರವರೆಗೆ ಅವಧಿಯನ್ನು ವಿಸ್ತರಿಸಿದೆ, ಈ ಸಮಯದಲ್ಲಿ, ವಿಮಾನಯಾನ ಸಂಸ್ಥೆಗಳು ಡಿಸೆಂಬರ್ 31, 2024 ಅಥವಾ ನಂತರ ಮಾರ್ಚ್, 31, 2025 ಮುಕ್ತಾಯಗೊಂಡ ಬಿಆರ್‌ಪಿ ಕಾರ್ಡ್‌ಗಳನ್ನು ಯುಕೆಗೆ ಪ್ರಯಾಣಿಸಲು ದಾಖಲೆಗಳಾಗಿ ತಾತ್ಕಾಲಿಕವಾಗಿ ಸ್ವೀಕರಿಸಬಹುದು.
ದಕ್ಷಿಣ ಕೊರಿಯಾದ ಮುಅನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಂಭವಿಸಿದ ವಿಮಾನ ದುರಂತದಲ್ಲಿ 179 ಮಂದಿ ಮೃತಪಟ್ಟಿದ್ದಾರೆ. ಬ್ಯಾಂಕಾಕ್‌ನಿಂದ ಮುಅನ್‌ಗೆ ಬರುತ್ತಿದ್ದ ಜೆಜು ಏರ್‌ನ ಬೋಯಿಂಗ್ ವಿಮಾನವು ಲ್ಯಾಂಡಿಂಗ್ ವೇಳೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಹೈಡ್ರಾಲಿಕ್ ಮತ್ತು ಎಂಜಿನ್ ವೈಫಲ್ಯ ಸಂಭವಿಸಿದೆ. ಈ ಅನಿರೀಕ್ಷಿತ ಘಟನೆಯಿಂದ ವಿಮಾನವು ನಿಯಂತ್ರಣ ಕಳೆದುಕೊಂಡು ಲ್ಯಾಂಡಿಂಗ್ ರನ್ ವೇಯಿಂದ ಜಾರಿ ಬಿದ್ದು ಕಾಂಕ್ರೀಟ್ ಗೋಡೆಯೊಂದಿಗೆ ಡಿಕ್ಕಿ ಹೊಡೆದು ಬೆಂಕಿ ಅವರಿತ್ತು. ವಿಮಾನದಲ್ಲಿದ್ದ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳ ಪೈಕಿ ಇಬ್ಬರು ಸಿಬ್ಬಂದಿಗಳು ಮಾತ್ರ ಗಂಭೀರ ಸ್ಥಿತಿಯಲ್ಲಿ ಬದುಕುಳಿದಿದ್ದಾರೆ. ಈ ಭೀಕರ ದುರಂತದ ನಂತರ, ದಕ್ಷಿಣ ಕೊರಿಯಾ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಿದೆ. ಜೆಜು ಏರ್ ಸಂಸ್ಥೆಯು ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. 2009ರಲ್ಲಿ ರೈನೇರ್‌ಗೆ ನೀಡಲ್ಪಟ್ಟಿದ್ದ ಈ ವಿಮಾನವು 2017ರಲ್ಲಿ ಜೆಜು ಏರ್‌ಗೆ ವರ್ಗಾಯಿಸಲ್ಪಟ್ಟಿತ್ತು. ಈ ದುರಂತವು 1997ರಿಂದಲೂ ದಕ್ಷಿಣ…
ಯುನೈಟೆಡ್ ಕಿಂಗ್ಡಮ್‌ನಲ್ಲಿ ಗಾಢ ಮಂಜು ಕಾರಣದಿಂದ ವಿಮಾನ ಸಂಚಾರದಲ್ಲಿ ಗಂಭೀರ ಅಡಚಣೆ ಉಂಟಾಗಿದೆ. ಹಲವಾರು ವಿಮಾನಗಳು ವಿಳಂಬಗೊಂಡಿವೆ, ಕೆಲವು ವಿಮಾನಗಳು ರದ್ದಾಗಿದ್ದು, ಕೆಲವು ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಪ್ರಯಾಣಿಕರು ತೀವ್ರ ಅನಾನುಕೂಲ ಅನುಭವಿಸುತ್ತಿದ್ದಾರೆ. UK ಯ ಪ್ರಮುಖ ಏರ್ ಟ್ರಾಫಿಕ್ ಕಂಟ್ರೋಲ್ ಪ್ರೊವೈಡರ್ ಇಲಾಖೆ ನ್ಯಾಷನಲ್ ಏರ್ ಟ್ರಾಫಿಕ್ ಸರ್ವಿಸಸ್ (NATS) ಹಾಗು ಹವಾಮಾನ ತಜ್ಞರ ಪ್ರಕಾರ , ಇಂಗ್ಲೆಂಡ್ ಮತ್ತು ವೇಲ್ಸ್ ನ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜಿನ ತೀವ್ರತೆ ಇನ್ನು ಕೆಲವು ದಿವಸಗಳು ಸಹ ಇರುವ ಸಾಧ್ಯತೆಯನ್ನು ಕಾಣುತ್ತಾರೆ. ಪ್ರಯಾಣಿಕರಿಗೆ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಸಲಹೆ ನೀಡಲಾಗಿದ್ದು, ರಸ್ತೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ವಿಮಾನ ವಿಳಂಬದಿಂದ ಗ್ಯಾಟ್‌ವಿಕ್ ಹಾಗು ಹೀಥ್ರು , ಮ್ಯಾಂಚೆಸ್ಟರ್, ಕಾರ್ಡಿಫ್ ವಿಮಾನ ನಿಲ್ದಾಣದಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿದ್ದು ಸಾವಿರಾರು ಜನರು ತಮ್ಮ ವಿಮಾನಕ್ಕಾಗಿ ಕಾಯುತ್ತಿದ್ದು, ಎಲ್ಲಿಯೂ ಕುಳಿತುಕೊಳ್ಳಲು ಕೂಡ ಅವಕಾಶವಿಲ್ಲ, ಟರ್ಮಿನಲ್‌ನಲ್ಲಿ ಸಾಕಷ್ಟು ಆಹಾರ ಲಭ್ಯವಿಲ್ಲ, ಶೌಚಾಲಯವನ್ನು ಬಳಸಲು ಗಂಟೆಗಟ್ಟಲು ಕಾಯಬೇಕಾದ ಪರಿಸ್ಥಿತಿಗಳು ಎದುರಾಗುತ್ತಿವೆ ಎಂದು ಪ್ರಯಾಣಿಕರು ತಮ್ಮ…
ಭಾರತೀಯ ರೂಪಾಯಿ ಡಾಲರ್ ಎದುರು ಇತಿಹಾಸದ ಅತ್ಯಂತ ಕೀಳಗಿನ ಮಟ್ಟ ತಲುಪಿದ್ದು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಸವಾಲಿನಂತಾಗಿಸಿದೆ. 3.75 ಬಿಲಿಯನ್ ಡಾಲರ್‌ಗಳ ಬಾಂಡ್ ಹರಾಜು ಮತ್ತು ಭಾರತೀಯ ಬಾಂಡ್ ಇಎಲ್ಡ್ ದರ ಹೆಚ್ಚಳದ ನಡುವೆ ರೂಪಾಯಿ ಡಾಲರ್‌ಗೆ 85.73 ರ ಕನಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕ , ಯುರೋಪ್, ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಆರ್ಥಿಕ ಅಸ್ಥಿರತೆಯ ಭೀತಿ ಹೆಚ್ಚಾಗಿದ್ದು ,ಇದರಿಂದಾಗಿ ಹೂಡಿಕೆದಾರರು ಸುರಕ್ಷಿತ ಆಯ್ಕೆಯಾಗಿ ಡಾಲರ್‌ನತ್ತ ಮುಖ ಮಾಡುತ್ತಿದ್ದಾರೆವಿದೇಶಿ ಪೋರ್ಟ್‌ಫೋಲಿಯೊ ಹೂಡಿಕೆದಾರರು (FPIs) ಭಾರತದ ಷೇರು ಮಾರುಕಟ್ಟೆಗಳಿಂದ ತಮ್ಮ ಹಣವನ್ನು ಹಿಂದಕ್ಕೆ ಪಡೆಯುತ್ತಿರುವುದು ಕೂಡ ರೂಪಾಯಿ ಕುಸಿತಕ್ಕೆ ಕಾರಣ ಅಂತ ಹೇಳಲಾಗುತ್ತಿದೆ ರೂಪಾಯಿ ಮೌಲ್ಯ ಕುಸಿತದಿಂದ ವಿದೇಶಿ ಕೆಲಸಗಾರರಿಗೆ ಹೆಚ್ಚಿನ ಆದಾಯವಿದೇಶದಲ್ಲಿ ಕೆಲಸ ಮಾಡುತ್ತಿರುವ NRI-ಗಳು ತಮ್ಮ ಕುಟುಂಬಗಳಿಗೆ ಅಥವಾ ಹೂಡಿಕೆಗಳಿಗೆ ಭಾರತಕ್ಕೆ ಹಣ ಕಳುಹಿಸಿದಾಗ, ಪ್ರತಿ ಡಾಲರ್ ಅಥವಾ ಇತರ ವಿದೇಶಿ ಕರೆನ್ಸಿಯೂ ಹೆಚ್ಚು ರೂಪಾಯಿ ನೀಡಬಹುದುಭಾರತೀಯ ಆಸ್ತಿ ಹೂಡಿಕೆಗಳಿಗೆ ಒಳ್ಳೆಯ ಕಾಲರೂಪಾಯಿ ಕುಸಿತದ ಸಮಯದಲ್ಲಿ…
ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕ್ರೈಸ್ತ ಸಮುದಾಯದ 155 ಮಂದಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸಹಿಯನ್ನು ಹಾಕಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ಗೆ ಮನವಿ ಮಾಡಿದ್ದಾರೆ ಅನಿಲ್ ಲೋಬೊ ಹಲವರಿಗೆ ಅನ್ಯಾಯ ಮಾಡಿದ್ದಾರೆ. ಮುಗ್ಧ ಮನೋಹರ್ ಪಿರೇರಾ ಸಾವಿಗೆ ನ್ಯಾಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದು, ಇದರ ಪ್ರತಿಯನ್ನು ಮುಖ್ಯಮಂತ್ರಿ, ಗೃಹ ಸಚಿವರು, ಸಹಕಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಸ್ಪೀಕರ್ ಯುಟಿ ಖಾದರ್ ಗೂ ರವಾನಿಸಿದ್ದಾರೆ. ದ.ಕ. ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಡಿ.27ರಂದು ನಿಗದಿಯಾಗಿದ್ದ ಜಾಮೀನು ಅರ್ಜಿಯು ಸರಕಾರಿ ರಜೆ ಘೋಷಣೆಯಾದ ಕಾರಣ ಮುಂದೂಡಿಕೆಯಾಗಿದೆ. ಡಿ.30ರಂದು ಅರ್ಜಿ ವಿಚಾರಣೆಗೆ ಬರಲಿದೆ. ಡಿ.18ರಂದು ಅನಿಲ್ ಲೋಬೊನನ್ನು ಕಂಕನಾಡಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಅನಿಲ್ ಲೋಬೊ ಅವರಿಗೆ ಜಿಲ್ಲಾ ಕೋರ್ಟ್ ಡಿ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ, ಡಿ.19ರಂದು ಲೋಬೊ ಪರ ವಕೀಲರು…
ಬೆಂಗಳೂರು: ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಹೊಸ ಗತಿ ನೀಡಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಐದು ಮಹಿಳಾ ಪದವೀಧರರಿಗೆ ಇಂಗ್ಲೆಂಡಿನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶನಿವಾರ ಅಧಿಕೃತವಾಗಿ ಪ್ರಾರಂಭಿಸಿದರು ಈ ಹೊಸ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಈ ಯೋಜನೆಯಡಿ ಆಯ್ಕೆಯಾದ ಐದು ಮಹಿಳಾ ಪದವೀಧರರಿಗೆ ಯುನೈಟೆಡ್ ಕಿಂಗ್‌ಡಮ್‌ನ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಪಿಜಿ ಅಥವಾ ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿವೇತನವು ಪ್ರವಾಸ ವೆಚ್ಚ, ವಸತಿ, ಬೋಧನಾ ಶುಲ್ಕ, ಮತ್ತು ದಿನನಿತ್ಯದ ಜೀವನೋಪಾಯ ವೆಚ್ಚವನ್ನು ಸಂಪೂರ್ಣವಾಗಿ ಒಳಗೊಂಡಿರುತ್ತದೆ. ಈ ಯೋಜನೆ ಶಿಕ್ಷಣದ ಮೂಲಭೂತ ಹಕ್ಕು ಮತ್ತು ಮಹಿಳಾ ಸಬಲೀಕರಣಕ್ಕೆ ನೂತನ ಆಯಾಮ ನೀಡಲು ಸರಕಾರದ ಉದ್ದೇಶವಾಗಿದೆ ಅರ್ಹತಾ ಮಾನದಂಡಗಳುಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕುಕನಿಷ್ಠ ಪದವೀಧರ ಪದವಿ ಉತ್ತಮ ಶ್ರೇಣಿಯೊಂದಿಗೆ ಹೊಂದಿರಬೇಕುಸಾಮಾಜಿಕ ಸೇವೆ, ನಾಯಕತ್ವ ಗುಣಗಳು ಮತ್ತು ಉನ್ನತ ಶಿಕ್ಷಣದ…
ಕಝಾಕಿಸ್ತಾನದ ಅಕ್ಟೌ (Aktua) ನಗರದ ಸಮೀಪ ಅಜರ್‌ಬೈಜಾನ್ ಏರ್‌ಲೈನ್ಸ್‌ನ ಪ್ರಯಾಣಿಕ ವಿಮಾನ ಪತನಗೊಂಡಿದ್ದು, 67 ಪ್ರಯಾಣಿಕರಲ್ಲಿ ಕನಿಷ್ಠ 25 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಅಜರ್‌ಬೈಜಾನ್‌ನ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ (Grozny) ತೆರಳುತ್ತಿದ್ದ ಈ ವಿಮಾನ, ತಾಂತ್ರಿಕ ಸಮಸ್ಯೆ ಎದುರಿಸಿದ ಪರಿಣಾಮ ತುರ್ತು ಲ್ಯಾಂಡಿಂಗ್ ಮಾಡುವ ವೇಳೆ ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತು. ಅಪಘಾತದಲ್ಲಿ 42ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಧಾವಿಸಿ, ಬದುಕುಳಿದವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದ ಕಾರಣವನ್ನು ತಿಳಿದುಕೊಳ್ಳಲು ತನಿಖೆ ಮುಂದುವರೆದಿದೆ.
ಪ್ಯಾರಿಸ್‌ನ ಐಕಾನಿಕ್ ಈಫೆಲ್ ಟವರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಜನರನ್ನು ರಕ್ಷಿಸಲಾಗಿದೆ. ಮಂಗಳವಾರ ಬೆಳಗ್ಗೆ, ಈಫೆಲ್ ಟವರ್‌ನ ಮೊದಲ ಮತ್ತು ಎರಡನೇ ಮಹಡಿಗಳ ನಡುವೆ ಇರುವ ಎಲಿವೇಟರ್ ಶಾಫ್ಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸುಮಾರು 12,000 ಜನರನ್ನು ಹೊರಗೆ ತರಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಯುಕೆ ನಿವಾಸಿಗಳು ಸಹ ಸೇರಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಬಂದರೂ, ಬೆಂಕಿಗೆ ಹತ್ತಿರವಾಗಿ ಹೋಗುವುದು ಕಷ್ಟವಾಗಿತ್ತು ಎಂದು ತಿಳಿದುಬಂದಿದೆ. ಬೆಂಕಿ ಹೊತ್ತಿಕೊಳ್ಳುವ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ, ಒಂದು ಎಲಿವೇಟರ್‌ನ ಕೇಬಲ್ ಅತಿಯಾಗಿ ಬಿಸಿಯಾಗಿರುವುದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದು, ಈಗ ಆಪತ್ಕಾಲೀನ ಸೇವೆಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುತ್ತಿವೆ. ಈ ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವು-ನೋವುಗಳು ವರದಿಯಾಗಿಲ್ಲ. ಈ ಘಟನೆಯ ಬಳಿಕ, ಈಫೆಲ್ ಟವರ್ ಮುಚ್ಚಿಹಾಕಲಾಗಿದೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಲಂಡನ್: ಶಕ್ತಿಶಾಲಿ ಗಾಳಿಯ ಪರಿಣಾಮವಾಗಿ, ಹೀಥ್ರು ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಲಾಗಿದೆ. ತೀವ್ರ ಗಾಳಿಗೆ ವಿಮಾನಗಳ ಇಳಿಯುವಿಕೆ ಮತ್ತು ಹಾರಾಟದ ವೇಳಾಪಟ್ಟಿಗೆ ಭಾರೀ ಅಡಚಣೆ ಉಂಟಾಗಿದೆ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ತಕ್ಷಣದ ಮಾಹಿತಿ ನೀಡುತ್ತಿದ್ದು, ತಮ್ಮ ವಿಮಾನಗಳ ಸ್ಥಿತಿಗತಿಗಳ ಬಗ್ಗೆ ತಿಳಿಯುವಂತೆ ಸಲಹೆ ನೀಡಿದ್ದಾರೆ. ತೀವ್ರ ಗಾಳಿಯ ಪರಿಣಾಮದಿಂದ ಪ್ರಯಾಣಿಕರು ತಮ್ಮ ಪ್ರಯಾಣಗಳನ್ನು ಮರುಪರಿಶೀಲಿಸಬೇಕಾಗಿದೆ. ಗಾಳಿಯ ವೇಗವು 70 ಮೈಲ್ಗಿಂತ ಹೆಚ್ಚು ತಲುಪಿರುವುದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಇದು ವಿಮಾನಗಳ ಇಳಿಯುವಿಕೆ ಮತ್ತು ಹಾರಾಟದ ವೇಳಾಪಟ್ಟಿಗೆ ಭಾರೀ ಅಡಚಣೆ ಉಂಟಾಗಿದೆ. ವಿಮಾನ ನಿಲ್ದಾಣದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರು ತಮ್ಮ ಪ್ರಯಾಣದ ಮಾರ್ಗದರ್ಶನಕ್ಕಾಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲು ಸೂಚಿಸಲಾಗಿದೆ.
Services
- About Us
- ಯುಕೆಕನ್ನಡಿಗ.ಕಂ ನ್ಯೂಸ್ ಚಾನೆಲ್ ಕನ್ನಡ ಮಾತನಾಡುವ ಸಮುದಾಯಕ್ಕಾಗಿ ವಿಶಿಷ್ಟವಾದ ಮಾಧ್ಯಮ ವೇದಿಕೆಯಾಗಿದ್ದು, ಯುನೈಟೆಡ್ ಕಿಂಗ್ಡಮ್ ಮತ್ತು ಕರ್ನಾಟಕದ ನಡುವೆ ಸಂಪರ್ಕವನ್ನು ಸ್ಥಾಪಿಸಲು ಮಾಧ್ಯಮವಾಗಿದೆ. ನಾವು ಯುಕೆಯಲ್ಲಿ ನಡೆಯುವ ಪ್ರಮುಖ ಘಟನೆಗಳು, ಕನ್ನಡ ಸಾಂಸ್ಕೃತಿಕ ಹಬ್ಬಗಳು, ಕರ್ನಾಟಕದ ತಾಜಾ ಸುದ್ದಿ ಮತ್ತು ಕನ್ನಡಿಗರ ಸಾಧನೆಗಳನ್ನು ಹಂಚುವ ವೇದಿಕೆಯಾಗಿದೆ. ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ. reachukkannadiga@gmail.com
- Contact Us
- Privacy Policy