ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ “ಗೋಲ್ಡ್ ಕಾರ್ಡ್” ವಲಸೆ ಯೋಜನೆ ಘೋಷಿಸಿದ್ದು, $5 ಮಿಲಿಯನ್ (ಸುಮಾರು ₹41 ಕೋಟಿ) ಪಾವತಿಸಿದ ವಿದೇಶಿಗರು ಅಮೇರಿಕಾದ ಶಾಶ್ವತ ವಾಸ ಅನುಮತಿ (ಗ್ರೀನ್ ಕಾರ್ಡ್) ಪಡೆಯಲು ಅರ್ಹರಾಗುತ್ತಾರೆ. ಈ ಯೋಜನೆಯ ಉದ್ದೇಶ ಅಮೇರಿಕಾದ ಆರ್ಥಿಕತೆ ಬಲಪಡಿಸುವುದು ಹಾಗೂ ಹೂಡಿಕೆಗಳನ್ನು ಆಕರ್ಷಿಸುವುದು ಎಂದು ಟ್ರಂಪ್ ಹೇಳಿದ್ದಾರೆ. ಸಾಮಾನ್ಯ ಗ್ರೀನ್ ಕಾರ್ಡ್ ಪ್ರಕ್ರಿಯೆಗೆ ಹಲವಾರು ವರ್ಷಗಳು ಬೇಕಾಗಬಹುದು, ಆದರೆ ಈ ಹೊಸ ಯೋಜನೆಯಡಿ ಶೀಘ್ರ ಅನುಮೋದನೆ ದೊರಕುವ ಸಾಧ್ಯತೆ ಇದೆ.

ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ, ಇದರಲ್ಲಿ ಉದ್ಯೋಗ ಅಥವಾ ಹೂಡಿಕೆ ಅಗತ್ಯವಿಲ್ಲ. ಕೇವಲ ನಿರ್ದಿಷ್ಟ ಮೊತ್ತ ಪಾವತಿಸಿದರೆ ಅಮೇರಿಕಾದ ಶಾಶ್ವತ ನಿವಾಸಿ ಆಗಬಹುದಾಗಿದೆ. ಸಾಮಾನ್ಯ ಗ್ರೀನ್ ಕಾರ್ಡ್ ಪ್ರಕ್ರಿಯೆಗೆ ಹಲವಾರು ವರ್ಷಗಳು ಬೇಕಾಗಬಹುದು. ಆದರೆ, ಈ ಯೋಜನೆಯಡಿ ವಿದೇಶಿ ನಾಗರಿಕರು ತ್ವರಿತವಾಗಿ ಅನುಮೋದನೆ ಪಡೆಯಬಹುದು, ಈ ಯೋಜನೆಯಡಿ, ಹಣ ಪಾವತಿಸಿದ ವ್ಯಕ್ತಿಯು ತಮ್ಮ ಪತ್ನಿ/ಪತಿ ಮತ್ತು 21 ವರ್ಷದೊಳಗಿನ ಮಕ್ಕಳನ್ನು ಕೂಡ ತಮ್ಮೊಂದಿಗೆ ಅಮೆರಿಕಕ್ಕೆ ಕರೆತರಲು ಸಾಧ್ಯವಾಗುತ್ತದೆ.

ಯೋಜನೆಯ ಉದ್ದೇಶ:
ಟ್ರಂಪ್ ಅವರು ಈ ಯೋಜನೆಯ ಉದ್ದೇಶವು ಅಮೆರಿಕದ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವುದು ಎಂದು ತಿಳಿಸಿದ್ದಾರೆ. ಇದು ಅಮೆರಿಕದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುವುದರ ಜೊತೆಗೆ ವಿದೇಶಿ ನಾಗರಿಕರಿಗೆ ಅಮೆರಿಕದಲ್ಲಿ ನೆಲೆಸಲು ಸುಲಭ ಮಾರ್ಗವನ್ನು ನೀಡುತ್ತದೆ
