ಲಂಡನ್ನಲ್ಲಿ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿಯ ಸಮಯದಲ್ಲಿ ಖಲಿಸ್ತಾನ್ ಬೆಂಬಲಿಗರಿಂದ ಹಲ್ಲೆ ಪ್ರಯತ್ನ ನಡೆದಿದೆ. ಸಚಿವರು ತಮ್ಮ ಕಾರಿನಲ್ಲಿ ಹತ್ತಲು ಮುಂದಾದಾಗ, ಒಬ್ಬ ವ್ಯಕ್ತಿ ಭಾರತೀಯ ಧ್ವಜವನ್ನು ಹರಿದು ಅವರತ್ತ ದೌಡಾಯಿಸಿದ ಘಟನೆ ನಡೆದಿದೆ. ಆದರೆ, ಕ್ಷಣಾರ್ಧದಲ್ಲೇ ಭದ್ರತಾ ಸಿಬ್ಬಂದಿ ಪ್ರವೇಶಿಸಿ ಆ ವ್ಯಕ್ತಿಯನ್ನು ತಡೆಯುವುದರೊಂದಿಗೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು. ಜೈಶಂಕರ್ ಅವರ ಕೌನವಾಯ್ ಸುರಕ್ಷಿತವಾಗಿ ಮುಂದುವರಿಯಿತು.


ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖಲಿಸ್ತಾನ್ ಬೆಂಬಲಿಗರು ಧ್ವಜಗಳನ್ನು ಹಿಡಿದು ಜೈಶಂಕರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಕಾಣಸಿಗುತ್ತದೆ. ಜೊತೆಗೆ, ಸಚಿವರು ಚರ್ಚೆಯಲ್ಲಿ ಭಾಗವಹಿಸುತ್ತಿದ್ದ ಸ್ಥಳದ ಹೊರಗಡೆ ಪ್ರತಿಭಟನೆ ನಡೆಯುತ್ತಿದ್ದ ಮತ್ತೊಂದು ವಿಡಿಯೊ ಕೂಡ ಹರಿದಾಡುತ್ತಿದೆ.

ಘಟನೆಯ ಸಮಯದಲ್ಲಿ ಸ್ಥಳೀಯ ಪೊಲೀಸರ ನಿರ್ಲಕ್ಷ್ಯತೆಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಈ ಮಧ್ಯೆ, ಕೇಂದ್ರ ಸಚಿವರ ಮೇಲೆ ನಡೆದ ಈ ಹಲ್ಲೆ ಪ್ರಯತ್ನವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಮಾರ್ಚ್ 4 ರಿಂದ 9 ರವರೆಗೆ ಜೈಶಂಕರ್ ಅವರು ಯುಕೆ ಪ್ರವಾಸದಲ್ಲಿದ್ದು, ನಂತರ ಐರ್ಲೆಂಡ್ಗೆ ಭೇಟಿ ನೀಡಲಿದ್ದಾರೆ.
