ನವದೆಹಲಿ: ಭಾರತ ಸರ್ಕಾರವು ವಿದ್ಯುತ್ ಕಾರುಗಳ (ಇ-ಕಾರುಗಳ) ಮೇಲಿನ ಆಮದು ತೆರಿಗೆಯನ್ನು ಐತಿಹಾಸಿಕವಾಗಿ 110% ರಿಂದ ಕಡಿಮೆ ಮಾಡಿ 15%ಕ್ಕೆ ತಗ್ಗಿಸಿದೆ. ಈ ನಿರ್ಧಾರವು ದೇಶದ ವಿದ್ಯುತ್ ವಾಹನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವುದಾಗಿ ವಿಶೇಷಜ್ಞರು ಹೇಳಿದ್ದಾರೆ. ಈ ಕ್ರಮದಿಂದ ಜಾಗತಿಕ ಇ-ವಾಹನ ದೈತ್ಯಗಳಾದ ಟೆಸ್ಲಾ ಮತ್ತು ಚೈನಾದ BYD ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಪ್ರಭಾವವನ್ನು ವೇಗವಾಗಿ ವಿಸ್ತರಿಸಲು ಸಿದ್ಧವಾಗಿವೆ. ಇದುವರೆಗೆ, ವಿದ್ಯುತ್ ಕಾರುಗಳನ್ನು ಭಾರತಕ್ಕೆ ಆಮದು ಮಾಡುವುದು ಅತ್ಯಂತ ದುಬಾರಿಯಾಗಿತ್ತು.

ಉದಾಹರಣೆಗೆ, ಟೆಸ್ಲಾದ ಮೂಲ ಬೆಲೆ ₹50 ಲಕ್ಷದ ಕಾರ್ ಅನ್ನು ಆಮದು ಮಾಡಿದರೆ, 110% ತೆರಿಗೆಯೊಂದಿಗೆ ₹1 ಕೋಟಿ ದಾಟುತ್ತಿತ್ತು. ಆದರೆ, ಈಗ ತೆರಿಗೆ 15%ಕ್ಕೆ ಇಳಿದಿರುವುದರಿಂದ ಅದೇ ಕಾರ್ ₹57.5 ಲಕ್ಷದಲ್ಲಿ ಲಭ್ಯವಾಗಲಿದೆ

ಟೆಸ್ಲಾ ಹಲವು ವರ್ಷಗಳಿಂದ ಭಾರತದಲ್ಲಿ ತನ್ನ ಕಾರ್ಖಾನೆ ಸ್ಥಾಪಿಸಲು ಸರ್ಕಾರದೊಂದಿಗೆ ಸಂವಾದ ನಡೆಸುತ್ತಿದೆ. ತೆರಿಗೆ ಇಳಿಕೆಯ ನಂತರ, ಕಂಪನಿಯು ತನ್ನ ಮಾಡೆಲ್ 3, ಮಾಡೆಲ್ Y ನಂತಹ ಪ್ರೀಮಿಯಂ ಕಾರ್ಗಳನ್ನು ಭಾರತದಲ್ಲಿ ನೇರವಾಗಿ ಮಾರಾಟ ಮಾಡಲು ಸಿದ್ಧವಾಗಿದೆ. ಇದರೊಂದಿಗೆ, ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಬಹುದು.

ಈ ಮೊದಲು ಅಮೆರಿಕಾದ ಧೈತ್ಯ ಆಪಲ್ ಸಂಸ್ಥೆ ಭಾರತದಲ್ಲಿ ತಮ್ಮ ಐಫೋನ್ ತಯಾರಿಕಾ ಘಟಕ ವನ್ನು ಸ್ಥಾಪಿಸಿದೆ. ಚೈನಾದ BYD ಕಂಪನಿಯು ಈಗಾಗಲೇ ಭಾರತದಲ್ಲಿ ತನ್ನ ಇ-ಬಸ್ಸುಗಳು ಮತ್ತು ಹೈಬ್ರಿಡ್ ಕಾರ್ಗಳನ್ನು ಪರಿಚಯಿಸಿದೆ. ತೆರಿಗೆ ಕಡಿತದಿಂದ, ಅವರ ಆಮದು ವಾಹನಗಳ ಬೆಲೆ 30-40% ರಷ್ಟು ಕಡಿಮೆಯಾಗಿ, ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಹಾಯಕವಾಗಿದೆ.
