ಕಳೆದ ಹಲವು ವರ್ಷಗಳಿಂದ ಪೌರತ್ವ ತೊರೆಯುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂಬ ಮಾಹಿತಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು. ವಿವಿಧ ದೇಶಗಳ ವೀಸಾ ಕೋರಿ ಅರ್ಜಿ ಸಲ್ಲಿಕೆ ಮಾಡುತ್ತಿರುವ ಭಾರತೀಯರ ಸಂಖ್ಯೆ ಏರುತ್ತಿದೆ. ಅದರಲ್ಲೂ ಪ್ರಮುಖವಾಗಿ ಯುರೋಪಿಯನ್ ದೇಶಗಳ ಗುಂಪಿಗೆ ಪ್ರಯಾಣಿಸಲು ಬೇಕಿರುವ ಷೆಂಗೆನ್ ವೀಸಾಗೆ ಅಧಿಕ ಸಂಖ್ಯೆಯಲ್ಲಿ ಭಾರತೀಯರು ಅರ್ಜಿ ಸಲ್ಲಿಸುತ್ತಿದ್ದಾರೆ ಜಾಗತಿಕವಾಗಿ ಷೆಂಗೆನ್ಗೆ ವೀಸಾ ಸಲ್ಲಿಸಿದರಲ್ಲಿ ತಿರಸ್ಕೃತವಾದ ಅರ್ಜಿಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ.

ಭಾರತೀಯ ಪ್ರವಾಸಿಗರಿಗೆ ವೀಸಾ ಪ್ರಕ್ರಿಯೆ ಕಷ್ಟಕರವಾಗುತ್ತಿದ್ದು, ನಿರಾಕರಣೆಗಳು ಪ್ರತಿ ವರ್ಷದಷ್ಟಕ್ಕೂ ಹೆಚ್ಚುತ್ತಿವೆ. ಇತ್ತೀಚಿನ ವರದಿ ಪ್ರಕಾರ, 2024ರಲ್ಲಿ ಮಾತ್ರ, ವೀಸಾ ನಿರಾಕರಣೆಗಳಿಂದ ಭಾರತೀಯರು ರೂ. 662 ಕೋಟಿ ನಷ್ಟವನ್ನು ಅನುಭವಿಸಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯ ಪ್ರಯಾಣಿಕರಿಗೆ ವೀಸಾ ಪಡೆಯುವುದು ಕಷ್ಟಕರವಾಗುತ್ತಿದೆ. ಹಲವು ದೇಶಗಳು ವೀಸಾ ನೀತಿಯನ್ನು ಕಟ್ಟುನಿಟ್ಟುಗೊಳಿಸಿರುವುದರಿಂದ ವೀಸಾ ನಿರಾಕರಣೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ, ವಿದೇಶ ಪ್ರವಾಸಕ್ಕಾಗಿ ಕನಸು ಕಂಡವರಿಗೆ ಇದು ದೊಡ್ಡ ಆಘಾತವಾಗಿದೆ.

2024ರಲ್ಲಿ ಶೆಂಗನ್ ವೀಸಾ ಅರ್ಜಿಗಳಲ್ಲಿ 966,687 ಪ್ರಕ್ರಿಯೆಗೊಳಗಾದರೂ, 151,752 ಅರ್ಜಿಗಳು ನಿರಾಕರಿಸಲ್ಪಟ್ಟಿವೆ. ಇದರ ಪರಿಣಾಮವಾಗಿ ಭಾರತೀಯರು ರೂ. 109 ಕೋಟಿ ನಷ್ಟ ಅನುಭವಿಸಿದ್ದಾರೆ. ವೀಸಾ ಅರ್ಜಿಯ ಫೀಸ್ ಹಿಂತಿರುಗಿಸದ ನೀತಿಗಳಿಂದಾಗಿ ಈ ನಷ್ಟವು ಉಂಟಾಗಿದೆ.
ವೀಸಾ ನಿರಾಕರಣೆಗೆ ಕಾರಣಗಳು:
ಅಸ್ಪಷ್ಟ ಪ್ರಯಾಣ ಉದ್ದೇಶ
ಶ್ರದ್ಧೆಯಿಂದ ಸಲ್ಲಿಸಲಾಗದ ದಾಖಲೆಗಳು
ಆರ್ಥಿಕ ಸ್ಥಿರತೆಯ ಸಾಕ್ಷ್ಯಗಳ ಕೊರತೆ
ಹಿಂದಿನ ವೀಸಾ ನಿಯಮ ಉಲ್ಲಂಘನೆಗಳು ವೀಸಾ ನಿರಾಕರಣೆಯಿಂದ ಉಂಟಾಗುವ ಹಣಕಾಸಿನ ನಷ್ಟವನ್ನು ತಪ್ಪಿಸಲು ಪ್ರಯಾಣ ವಿಮೆ ಪಾಲಿಸಿಗಳನ್ನು ತೆಗೆದುಕೊಳ್ಳುವುದು ಅತ್ಯಂತ ಪ್ರಾಮುಖ್ಯ ವೀಸಾ ನಿರಾಕರಣೆಯಿಂದಾಗಿ ವಿಮಾನ ಟಿಕೆಟ್, ಹೋಟೆಲ್ ಬುಕಿಂಗ್ ಮುಂತಾದವುಗಳಿಗೆ ಪಾವತಿಸಿದ ಹಣವನ್ನು ಮರಳಿ ಪಡೆಯಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ
