ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣ ಎನ್ನುವುದು ಮ್ಯಾಜಿಕ್ ಸ್ಟಿಕ್ ಇದ್ದ ಹಾಗೆ. ಇದು ಯಾರ ಜೀವನವನ್ನಾದರೂ ಕೇವಲ ಒಂದು ರಾತ್ರಿಯಲ್ಲಿ ಶೂನ್ಯದಿಂದ ಶಿಖರವರೆಗೆ ತಲುಪಿಸಬಲ್ಲದು. ಇಲ್ಲಿದೆ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿ ಸ್ಟೋರಿ, ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಜನವರಿ 13 ರಂದು ಪ್ರಯಾಗ್ ರಾಜ್‌ನಲ್ಲಿ ಆರಂಭವಾದ ಈ ಅದ್ಧೂರಿ ಆಚರಣೆಗೆ ಅಪಾರ ಸಂಖ್ಯೆಯ ಭಕ್ತರು, ಸಾಧುಗಳು ಮತ್ತು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕೋಟಿಗಟ್ಟಲೆ ಜನರು ಸೇರುತ್ತಾರೆ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳ ಸೋಮವಾರದಿಂದ ಆರಂಭವಾಗಲಿದ್ದು, ಫೆ.26ರವರೆಗೆ ನಡೆಯಲಿದೆ. ಈ ಸಮಾರಂಭದ ಅಂತ್ಯದ ವೇಳೆಗೆ 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ಅಂದಾಜಿದೆ
ಕೆಲವು ದಿನಗಳ ಹಿಂದೆ ಪ್ರಯಾಗ್‌ರಾಜ್ ಮಹಾಕುಂಭದ ವಿಡಿಯೋವೊಂದು ವೈರಲ್ ಆಗಿತ್ತು. ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡಲು ಬಂದ ಹುಡುಗಿಯ ಸುಂದರ ಕಣ್ಣುಗಳು ನೆಟ್ಟಿಗರನು ಆಕರ್ಷಿಸಿದವು. ಮೊನಾಲಿಸಾ ಮಧ್ಯಪ್ರದೇಶದ ಇಂದೋರ್‌ನ ಬಡ ಕುಟುಂಬದ ಹೆಣ್ಣು ಮಗಳು. ತಂದೆ-ತಾಯಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮೊನಾಲಿಸಾ ಹಾಗೂ ಆಕೆಯ ತಂಗಿ ಕೂಡ ಹಗಲು ರಾತ್ರಿ ಎನ್ನದೇ ಜನದಟ್ಟಣೆ ಇರುವ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಹೂವು, ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದರು. ಮಹಾ ಕುಂಭ ಮೇಳ ಆರಂಭವಾದಗ ಮೊದಲೆರಡು ದಿನಗಳು ವ್ಯಾಪಾರ ಮಾಡಿಕೊಂಡಿದ್ದ ಮೊನಾಲಿಸಾ ಅದ್ಯಾವಾಗ ಒಬ್ಬ ವಿಡಿಯೋ ಕಂಟೆಂಟ್ ಕ್ರಿಯೇಟರ್ ಕಣ್ಣಿಗೆ ಬಿದ್ದಳೋ ಗೊತ್ತಿಲ್ಲ. ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಆಕೆಯದ್ದೇ ಹವಾ, ಕರ್ಷಕ ಕಣ್ಣುಗಳು, ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾಳೆ
ಇದೀಗ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಹುಡುಗಿಯ ಅದೃಷ್ಟ ಖುಲಾಯಿಸಿದೆ. ಸೌಂದರ್ಯವೇ ಆಕೆಗೆ ವರವಾಗಿದೆ. ಇದೇ ಸಾಮಾಜಿಕ ಜಾಲತಾಣದಿಂದ ಬಾಲಿವುಡ್‌ಗೆ ಬಿಗ್ ಆಫರ್ ಒಂದು ಆಕೆಗೆ ಒಲಿದು ಬಂದಿದೆ ಎನ್ನಲಾಗ್ತಿದೆ
ಈ ಅಕಸ್ಮಾತ್ ಪ್ರಸಿದ್ಧಿ ಮೋನಾಲಿಸಾಗೆ ಹೊಸ ಸಮಸ್ಯೆಗಳನ್ನು ತಂದಿದೆ. ಕುಂಭಮೇಳದಲ್ಲಿ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಜನರು ಉತ್ಸುಕರಾಗಿದ್ದಾರೆ, ಇದು ಅವರ ವ್ಯಾಪಾರಕ್ಕೆ ತೊಂದರೆ ಉಂಟುಮಾಡುತ್ತಿದೆ. “ಜನರು ನನ್ನೊಂದಿಗೆ ಫೋಟೋ ತೆಗೆದುಕೊಳ್ಳುತ್ತಿದ್ದು, ಮಾಲೆಗಳನ್ನು ಮಾರಲು ನನಗೆ ಸಮಯವೇ ಸಿಗುತ್ತಿಲ್ಲ,” ಎಂದು ಮೋನಾಲಿಸಾ ದೂರು ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಮೋನಾಲಿಸಾದ ಸೌಂದರ್ಯವನ್ನು ಮೆಚ್ಚಿಕೊಂಡರೂ, ಕೆಲವರು ಜನರ ವರ್ತನೆಗೆ ಟೀಕೆ ಮಾಡಿದ್ದಾರೆ. “ಅವರ ಸುರಕ್ಷತೆಗೆ ನಾವು ಪ್ರಾರ್ಥಿಸುತ್ತೇವೆ, ಏಕೆಂದರೆ ಇಂತಹ ಪ್ರಸಿದ್ಧಿ ಕಷ್ಟಕರವಾಗಬಹುದು,” ಎಂದು ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.