ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ, ಬೀದಿ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡುವ ಮಂಗಳೂರು ಮಹಾನಗರ ಪಾಲಿಕೆಯ ‘ಟೈಗರ್ ಆಪರೇಶನ್’ ಬಗ್ಗೆ ಕಟು ಟೀಕೆ ಮಾಡಿದ್ದಾರೆ, ಕೆಲವು ತಿಂಗಳ ಹಿಂದೆ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಲವಂತವಾಗಿ ಬುಲ್ಡೋಝರ್ ಕಾರ್ಯಾಚರಣೆಯ (‘ಟೈಗರ್ ಕಾರ್ಯಾಚರಣೆ’ )ನಡೆಸಿ ಬೀದಿ ಬದಿಯಲ್ಲಿ ಟೀ, ಕಾಫಿ, ಚುರುಮುರಿ, ಆಮ್ಲೆಟ್ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಜನಸಾಮಾನ್ಯರ ಆದಾಯದ ಮೂಲವಾಗಿದ್ದ ಗೂಡಂಗಡಿಗಳನ್ನು ತೆರವು ಗೊಳಿಸಿದ್ದರು ಸ್ಥಳೀಯ ವ್ಯಾಪಾರಿಗಳ ಮೇಲೆ ನಡೆದ ದ್ವಂದ್ವ ನೀತಿ ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೀಡಾಗಿದೆ.


ಲೇಡಿ ಹಿಲ್ ವೃತ್ತದ ಬಳಿ ಜನವರಿ 18 ರಿಂದ 22 ರವರೆಗೆ ಆಯೋಜಿಸಲಾದ ಐದು ದಿನಗಳ ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟಾ ಗೆ ಬೀದಿ ಬದಿ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರನ್ನು ಅತಿಥಿಯಾಗಿ ಆಹ್ವಾನಿಸಿರುವ ಬೆನ್ನಲ್ಲೇ ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು ತಮ್ಮ ಇನ್ಸ್ಟ್ರಾಗ್ರಾಂ ಸ್ಟೋರಿಯಲ್ಲಿ ಡಾಲಿ ಚಾಯ್ ವಾಲಾ ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿತ್ತು ಎಂದು ಬರೆದಿದ್ದಾರೆ. ಪೋಸ್ಟ್ ಈಗ ವೈರಲ್ ಆಗಿದ್ದು ನೂರಾರು ಮಂದಿ ಈ ಪೋಸ್ಟ್ ಈಗ ಶೇರ್ ಮಾಡಿದ್ದಾರೆ.

ಬೀದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಜ್, ನಗರಪಾಲಿಕೆ ಹಾಗೂ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಜೀಸಿಗಳ ಮೂಲಕ ಜೀವನೋಪಾಯವನ್ನು ನಾಶಮಾಡಿ, ನಂತರ ತಮ್ಮ ನಿಯಮಗಳನ್ನೇ ಉಲ್ಲಂಘಿಸಿ ಉತ್ಸವ ಆಯೋಜಿಸಿದರು,” ಎಂದು ಆರೋಪಿಸಿದ್ದಾರೆ.
