ಎಮಿರೇಟ್ಸ್ ವಿಮಾನಕಂಪನಿ ಹೊಸ ಕ್ಯಾಬಿನ್ ಕ್ರೂ ಸದಸ್ಯರ ನೇಮಕಾತಿಗಾಗಿ ದೆಹಲಿ (ಜನವರಿ 28) ಮತ್ತು ಬೆಂಗಳೂರು (ಜನವರಿ 30) ವಿಶೇಷ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ವೇತನ, ಉಚಿತ ಪ್ರಯಾಣ, ದುಬೈನಲ್ಲಿ ಸಕಲ ಸೌಲಭ್ಯಗಳೊಂದಿಗೆ ವಾಸದ ವ್ಯವಸ್ಥೆ ನೀಡಲಾಗುತ್ತದೆ.

ಅರ್ಹತೆಗಳು ಆತಿಥ್ಯ ಸೇವಾ ಕ್ಷೇತ್ರದಲ್ಲಿ 1 ವರ್ಷದ ಅನುಭವ. ( At least 1 year of hospitality or customer service experience) ಪ್ಲಸ್ ಟು ವಿದ್ಯಾರ್ಹತೆ ಅಗತ್ಯ. ಆಂಗ್ಲ ಭಾಷಾ ಕೌಶಲ್ಯ ಅಗತ್ಯ (Fluent in written and spoken English (additional languages are an advantage) ಕನಿಷ್ಠ 21 ವರ್ಷ ವಯಸ್ಸು, 160 ಸೆಂ.ಮೀ ಎತ್ತರ. ದೇಹದ ದೃಶ್ಯಭಾಗದಲ್ಲಿ ಟಾಟೂ ಇರಬಾರದು.

ಅನುಕೂಲಗಳು ಉತ್ತಮ ವೇತನ, ಉಚಿತ ತರಬೇತಿ, ದುಬೈನಲ್ಲಿ ವಾಸದ ಸೌಲಭ್ಯ, ಉಚಿತ ವಿಮಾನಯಾನ ಅವಕಾಶ.ವಿವಿಧ ವಿಭಾಗಗಳಾದ ಕ್ಯಾಬಿನ್ ಕ್ರೂ, ಗ್ರೌಂಡ್ ಸಿಬ್ಬಂದಿ, ಎಂಜಿನಿಯರಿಂಗ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಎಮಿರೇಟ್ಸ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಎಮಿರೇಟ್ಸ್ ಕಂಪನಿ ತನ್ನ ಸೇವೆಯನ್ನು ವಿಸ್ತರಿಸಲು ಹೊಸ ಬೋಯಿಂಗ್ 777 ಎಕ್ಸ್ ಮತ್ತು ಏರ್‌ಬಸ್ 350 ವಿಮಾನಗಳನ್ನು ಸೇರ್ಪಡೆ ಮಾಡುತ್ತಿದೆ. ಈ ವಿಸ್ತರಣೆಯ ಭಾಗವಾಗಿ, ಉನ್ನತ ಮಟ್ಟದ ಕ್ಯಾಬಿನ್ ಕ್ರೂ ಸದಸ್ಯರನ್ನು ಆಯ್ಕೆ ಮಾಡುವುದು ಕಂಪನಿಯ ಗುರಿಯಾಗಿದೆ.

ಎಮಿರೇಟ್ಸ್‌ನ ಈ ನೇಮಕಾತಿ ಅಭಿಯಾನವು ಭಾರತದ ಯುವಕರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಲಿದೆ. ಆಸಕ್ತ ಅಭ್ಯರ್ಥಿಗಳು ಅರ್ಹತೆ, ಅನುಭವ ಮತ್ತು ಇತರ ಮಾನದಂಡಗಳನ್ನು ಪೂರೈಸಿದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. Emirates Job ಲಿಂಕ್ ಇಲ್ಲಿದೆ https://www.emiratesgroupcareers.com/cabin-crew/
