ಯುಕೆ-ಭಾರತ ಯುವ ವೃತ್ತಿಪರ ಯೋಜನೆ (Young Professionals Scheme) 2025 – ಯುನೈಟೆಡ್ ಕಿಂಗ್ಡಮ್ (ಯುಕೆ) ಸರ್ಕಾರ 2025ರ ಯಂಗ್ ಪ್ರೊಫೆಷನಲ್ ವೀಸಾ ಅರ್ಜಿಗಳನ್ನು ಆಹ್ವಾನಿಸಿದೆ.

ಯುನೈಟೆಡ್ ಕಿಂಗ್‌ಡಮ್ (UK) ಸರ್ಕಾರ “ಯುಕೆ-ಭಾರತ ಯುವ ವೃತ್ತಿಪರ ಯೋಜನೆ” (Young Professionals Scheme – YPS) 2025 ರ ಬ್ಯಾಲೆಟ್ ಪ್ರಕ್ರಿಯೆಯನ್ನು ಫೆಬ್ರವರಿ 18, 2025 ರಿಂದ ಆರಂಭಿಸಲಿದೆ. ಈ ಸುವರ್ಣಾವಕಾಶ ನಿಮ್ಮ ಭವಿಷ್ಯಕ್ಕೆ ಹೊಸ ಮಾರ್ಗವನ್ನು ತೆರೆಯಲಿದೆ. ಭಾರತದ 18 ರಿಂದ 30 ವರ್ಷ ವಯಸ್ಸಿನ ಯುವಕರು ಯುಕೆಗೆ ತೆರಳಿ 2 ವರ್ಷಗಳವರೆಗೆ ಕೆಲಸ, ಅಧ್ಯಯನ ಮತ್ತು ವಾಸ್ತವ್ಯಕ್ಕೆ ಅವಕಾಶ ಪಡೆಯಬಹುದು.

ನೋಂದಣಿ ಸಮಯ:
📅 ಫೆಬ್ರವರಿ 18 – ಫೆಬ್ರವರಿ 20, 2025
🌐 ಅಧಿಕೃತ ಯುಕೆ ಸರ್ಕಾರದ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬೇಕು https://www.gov.uk/guidance/india-young-professionals-scheme-visa-ballot-system

ಅರ್ಹತಾ ಮಾನದಂಡ:
✔ ಭಾರತದ ಪ್ರಜೆ ಆಗಿರಬೇಕು
✔ 18 ರಿಂದ 30 ವರ್ಷ ವಯಸ್ಸಿನ ನಡುವೆ ಇರಬೇಕು
✔ ಯುಕೆ ಬ್ಯಾಚುಲರ್ ಪದವಿಯ ಸಮಾನ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು
✔ ಯುಕೆ ಗೆ ತೆರಳಿದ ಬಳಿಕ ಜೀವನ ನಿರ್ವಹಣೆಗೆ ಕನಿಷ್ಠ £2,530 (ಸುಮಾರು ₹2.7 ಲಕ್ಷ) ಉಳಿತಾಯದಲ್ಲಿ ಇರಬೇಕು (ಆಯ್ಕೆಯಾದ ಅಭ್ಯರ್ಥಿಗಳಿಗೆ)
✔ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪಾಲಕರಾಗಿರಬಾರದು.
ಬ್ಯಾಲೆಟ್ ನೋಂದಣಿ ಪ್ರಕ್ರಿಯೆ – ಮುಕ್ತ ಮತ್ತು ಉಚಿತ! ನಿಮ್ಮ ಪಾಸ್‌ಪೋರ್ಟ್ ವಿವರಗಳು, ಜನ್ಮ ದಿನಾಂಕ, ಪೂರ್ಣ ಹೆಸರು, ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಸಲ್ಲಿಸಿ ಫೆಬ್ರವರಿ 18 – 20, 2025 ರೊಳಗೆ ನೋಂದಣಿ ಮಾಡಿ.
ಆಯ್ಕೆ ಪ್ರಕ್ರಿಯೆ ಮತ್ತು ಮುಂದಿನ ಹಂತಗಳು:
🔹 ಯಾದೃಚ್ಛಿಕ (random) ಆಯ್ಕೆ ಪ್ರಕ್ರಿಯೆ – ಬ್ಯಾಲೆಟ್ Date ಮುಕ್ತಾಯದ ನಂತರ ನಡೆಯಲಿದೆ
🔹 ಆಯ್ಕೆಯಾದ ಅಭ್ಯರ್ಥಿಗಳಿಗೆ ಫೆಬ್ರವರಿ ಕೊನೆ ಅಥವಾ ಮಾರ್ಚ್ ಆರಂಭದಲ್ಲಿ ಇಮೇಲ್ ಮೂಲಕ ಮಾಹಿತಿ ನೀಡಲಾಗುವುದು
🔹 ಆಯ್ಕೆಗೊಂಡ ಬಳಿಕ 90 ದಿನಗಳೊಳಗಾಗಿ ವೀಸಾ ಅರ್ಜಿ ಸಲ್ಲಿಸಬೇಕು
🔹 ವೀಸಾ ಶುಲ್ಕ: £298
🔹 ವೀಸಾ ಒಪ್ಪಿಗೆ ಸಿಕ್ಕ ಬಳಿಕ 6 ತಿಂಗಳೊಳಗಾಗಿ ಯುಕೆ ಗೆ ಪ್ರಯಾಣಿಸಬೇಕು
India Young Professionals Scheme ballot will open at 2:30pm India Standard Time on 18 February 2025, and will close at 2:30pm India Standard Time on 20 February 2025.
