ಲಂಡನ್ : ಬ್ರಿಟನ್‌ನಲ್ಲಿ “ನರ್ಸ್” ಎಂಬ ಹುದ್ಧೆ ಹೆಸರನ್ನು ಕಾನೂನಾತ್ಮಕವಾಗಿ ರಕ್ಷಿಸಲು ಹೊಸ ಬಿಲ್‌ನ್ನು ಪರಿಚಯಿಸಲಾಗುತ್ತಿದೆ. ಈ ಬಿಲ್‌ನ್ನು ಸಂಸದ ಡಾನ್ ಬಟ್ಲರ್ ಪ್ರಸ್ತಾಪಿಸಿದ್ದಾರೆ ಇ ಬಿಲ್ ಯುಕೆ ನರ್ಸಿಂಗ್ ವೃತ್ತಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರಲಿದ್ದು. ಅಂತರಾಷ್ಟ್ರೀಯ ನಿಯಮಗಳ ಭಾಗವಾಗಿ, “ನರ್ಸ್” ಎಂಬ ಪದದ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಈ ಹೊಸ ನಿಯಮದ ಪ್ರಕಾರ, ಯುಕೆನಲ್ಲಿ ನರ್ಸ್ ಎಂದು ಕೆಲಸ ಮಾಡಲು ಬಯಸುವ ಪ್ರತಿಯೊಬ್ಬರೂ ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಲೇಬೇಕು.

ಇನ್ನು ಮುಂದೆ, ಯುಕೆನಲ್ಲಿ ಅಧಿಕೃತವಾಗಿ ನೋಂದಾಯಿತ ನರ್ಸ್‌ಗಳು ಮಾತ್ರ ತಮ್ಮ ಹೆಸರಿನ ಮುಂದೆ “ನರ್ಸ್” ಎಂದು ಬಳಸಬಹುದು. ಬೇರೆ ದೇಶಗಳಲ್ಲಿ ನರ್ಸಿಂಗ್ ತರಬೇತಿ ಪಡೆದವರು ಯುಕೆನಲ್ಲಿ ಕೆಲಸ ಮಾಡಬೇಕೆಂದರೆ, ಅವರು ಯುಕೆ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್‌ನಲ್ಲಿ (ಎನ್‌ಎಂಸಿ) ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ, ಎನ್‌ಎಂಸಿ ನಿಗದಿಪಡಿಸಿರುವ ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರಬೇಕು. ಅಗತ್ಯ ದಾಖಲೆಗಳು, ಪರೀಕ್ಷೆಗಳು ಮತ್ತು ಅನುಭವವನ್ನು ಪರಿಶೀಲಿಸಿದ ನಂತರವೇ ನೋಂದಣಿ ಸಿಗುತ್ತದೆ.

ಈ ಕಠಿಣ ನಿಯಮಗಳನ್ನು ಜಾರಿಗೆ ತರುವ ಉದ್ದೇಶ ಹಲವು. ಮೊದಲನೆಯದಾಗಿ, ಯುಕೆನಲ್ಲಿ ನರ್ಸಿಂಗ್ ಸೇವೆಯ ಗುಣಮಟ್ಟವನ್ನು ಕಾಪಾಡುವುದು. ಎರಡನೆಯದಾಗಿ, ರೋಗಿಗಳ ಸುರಕ್ಷತೆಯನ್ನು ಖಚಿತಪಡಿಸುವುದು. “ನರ್ಸ್” ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಸೂಕ್ತ ತರಬೇತಿ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು ಎಂಬುದು ಇದರ ಮುಖ್ಯ ಗುರಿ. ಮೂರನೆಯದಾಗಿ, ಅಂತರಾಷ್ಟ್ರೀಯ ಮಟ್ಟದಲ್ಲಿ ನರ್ಸಿಂಗ್ ವೃತ್ತಿಯ ಘನತೆಯನ್ನು ಎತ್ತಿಹಿಡಿಯುವುದು. ಈ ನಿಯಮವು ಬೇರೆ ದೇಶಗಳಲ್ಲೂ ನರ್ಸಿಂಗ್ ಗುಣಮಟ್ಟ ಹೆಚ್ಚಿಸಲು ಪ್ರೇರೇಪಿಸುತ್ತದೆ ಎಂದು ನಂಬಲಾಗಿದೆ.
RCN ನೊಂದಾಯಿತ ನರ್ಸ್‌ಗಳ ಪರ ಬೆಂಬಲ
“ರಾಯಲ್ ಕಾಲೇಜ್ ಆಫ್ ನರ್ಸಿಂಗ್” (RCN) ಈ ಬಿಲ್‌ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ನರ್ಸಿಂಗ್ ವೃತ್ತಿಯ ಗೌರವ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಲು ಈ ಬದಲಾವಣೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟಿದೆ.
RCN ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ನಿಕೋಲಾ ರೇಂಜರ್ ಈ ಬಗ್ಗೆ ಮಾತನಾಡಿ,
“ನರ್ಸಿಂಗ್ ವೃತ್ತಿ ಅತ್ಯಂತ ಪ್ರಾಮುಖ್ಯತೆಯದ್ದಾಗಿದ್ದು, ಇದನ್ನು ಕಾನೂನಾತ್ಮಕವಾಗಿ ರಕ್ಷಿಸುವ ಅಗತ್ಯವಿದೆ. ‘ನರ್ಸ್’ ಎಂಬ ಹುದ್ದೆ ನಿರ್ಧಿಷ್ಟ ತರಬೇತಿ, ಪರಿಣತಿ ಮತ್ತು ನೈತಿಕತೆ ಹೊಂದಿದವರಿಗೇ ಸೀಮಿತವಾಗಬೇಕು. ಇದು ರೋಗಿಗಳ ಭದ್ರತೆಯನ್ನು ಹೆಚ್ಚಿಸುವುದರ ಜೊತೆಗೆ, ನರ್ಸಿಂಗ್ ವೃತ್ತಿಯ ಗೌರವವನ್ನು ಕಾಪಾಡುತ್ತದೆ” ಎಂದು ಹೇಳಿದರು.
ಈ ಹೊಸ ನಿಯಮದಿಂದ ಯುಕೆನಲ್ಲಿ ನರ್ಸಿಂಗ್ ಸೇವೆಗಳನ್ನು ಪಡೆಯುವ ರೋಗಿಗಳಿಗೆ ಹೆಚ್ಚಿನ ಭದ್ರತೆ ಸಿಗುತ್ತದೆ. “ನರ್ಸ್” ಎಂದು ಕರೆಯಲ್ಪಡುವ ವ್ಯಕ್ತಿಯು ಯುಕೆನಲ್ಲಿ ನೋಂದಾಯಿತ ಮತ್ತು ಅರ್ಹತೆ ಹೊಂದಿದ್ದಾರೆಂದು ಅವರು ಖಚಿತವಾಗಿರಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಯುಕೆ ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ ವೆಬ್‌ಸೈಟ್ (www.nmc.org.uk) ಅಥವಾ ಸಂಬಂಧಿತ ಸುದ್ದಿ ಮೂಲಗಳನ್ನು ನೋಡಬಹುದು
