ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಲು ಆಸಕ್ತಿಯಿರುವ ಅಂತರರಾಷ್ಟ್ರೀಯ ನರ್ಸ್‌ಗಳಿಗೆ ಸುವರ್ಣಾವಕಾಶ. ನರ್ಸ್‌ಗಳ ಕೊರತೆಯನ್ನು ನಿಭಾಯಿಸಲು ಆಸ್ಟ್ರೇಲಿಯಾ ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

2025 ಏಪ್ರಿಲ್‌ನಿಂದ ಸಿಂಗಾಪುರ್, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ಯುನೈಟೆಡ್ ಸ್ಟೇಟ್ಸ್, ಸ್ಪೇನ್ ಹಾಗೂ ಕೆನಡಾದ ಬ್ರಿಟಿಷ್ ಕೊಲಂಬಿಯಾ ಮತ್ತು ಓಂಟಾರಿಯೊ ರಾಜ್ಯಗಳಿಂದ ಅರ್ಜಿ ಸಲ್ಲಿಸುವ ನರ್ಸ್‌ಗಳ ಅರ್ಜಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುವುದು.

ಆಸ್ಟ್ರೇಲಿಯನ್ ಹೆಲ್ತ್ ಪ್ರಾಕ್ಟೀಶನರ್ ರೆಗುಲೇಶನ್ ಏಜೆನ್ಸಿ (Ahpra) ಈ ಯೋಜನೆಯನ್ನು ಜನವರಿ 26ರಂದು ಘೋಷಿಸಿದ್ದು, 2017 ರಿಂದ ಕನಿಷ್ಠ 1,800 ಗಂಟೆಗಳ ಕಾರ್ಯಾನುಭವ ಹೊಂದಿರುವ ನೋಂದಾಯಿತ ನರ್ಸ್‌ಗಳಿಗೆ ಪರೀಕ್ಷೆ ಅಥವಾ ಇತರ ಮೌಲ್ಯಮಾಪನಗಳಿಂದ ವಿನಾಯ್ತಿ ನೀಡಲಾಗುತ್ತದೆ.ಈ ಯೋಜನೆಯಡಿ, ನರ್ಸ್‌ಗಳ ಅರ್ಜಿ ಪ್ರಕ್ರಿಯೆಯ ಸಮಯವನ್ನು ಮುಂಚಿನ 9 ರಿಂದ 12 ತಿಂಗಳ ಬದಲು ಕೇವಲ 1 ರಿಂದ 6 ತಿಂಗಳಿಗೆ ಕಡಿಮೆ ಮಾಡಲಾಗಿದೆ. 2035ರೊಳಗೆ ಆಸ್ಟ್ರೇಲಿಯಾದಲ್ಲಿ ಸುಮಾರು 71,000 ನರ್ಸ್‌ಗಳ ಕೊರತೆ ಎದುರಾಗಲಿದೆ ಎಂಬ ಅಂದಾಜು ಇರುವುದರಿಂದ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ನರ್ಸ್‌ಗಳನ್ನು ನೇಮಕ ಮಾಡುವುದು ಅತ್ಯಗತ್ಯವಾಗಿದೆ.
Direct Registration Without NCLEX & OSCE
UK, Ireland, USA, Canada, Singapore, or Spain
Must have 1,800 hours of practice since 2017
No NCLEX or OSCE required for direct registration
Essential Registration Requirements
Criminal History Check
English Language Proficiency (OET, IELTS, or PTE Academic)
Recency of Practice (minimum practice hours required)
Continuing Professional Development (CPD)
Professional Indemnity Insurance (PII)
