ಭಾರತದ ಅತಿದೊಡ್ಡ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಇಂಡಿಗೋ , 2025ರ ಜುಲೈ 1ರಿಂದ ದೆಹಲಿ (DEL) ಮತ್ತು ಯುನೈಟೆಡ್ ಕಿಂಗ್ಡಮ್‌ನ ಮ್ಯಾಂಚೆಸ್ಟರ್ (MAN) ನಡುವಿನ ನೇರ ವಿಮಾನ ಸೇವೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದು ಯೂರೋಪ್ ಮಾರುಕಟ್ಟೆಗೆ ಇಂಡಿಗೋ ತನ್ನ ಮೊದಲ ಹೆಜ್ಜೆ ಇಡುತ್ತಿರುವ ಮಹತ್ವದ ಕ್ಷಣವಾಗಲಿದೆ.
ಸೇವೆಯ ವಿವರಗಳು: ಪ್ರಾರಂಭದ ದಿನಾಂಕ: 2025ರ ಜುಲೈ 1ಇಂಡಿಗೋ ಪ್ರತಿ ದಿನ ದೆಹಲಿ (DEL) ಮತ್ತು ಮ್ಯಾಂಚೆಸ್ಟರ್ (MAN) ನಡುವಿನ ನೇರ ವಿಮಾನ ಸೇವೆಯನ್ನು ನಿಭಾಯಿಸಲು ಯೋಜಿಸಿದೆ. ವಿಮಾನ 6E31 ಬೆಳಗ್ಗೆ 07:55 GMT ಮ್ಯಾಂಚೆಸ್ಟರ್‌ಗೆ ತಲುಪುವುದು ಮತ್ತು 6E32 ಮ್ಯಾಂಚೆಸ್ಟರ್‌ನಿಂದ ಬೆಳಗ್ಗೆ 10:55 GMT ಹೊರಡುತ್ತದೆ. ಈ ಮಾರ್ಗದಲ್ಲಿ ಇಂಡಿಗೋ ಬೋಯಿಂಗ್ 787-9 ಡ್ರೀಮ್‌ಲೈನರ್‌ಗಳನ್ನು ಬಳಸಲು ಯೋಜಿಸಲಾಗಿದೆ. ಈ ವಿಮಾನಗಳು ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ಸೌಲಭ್ಯವನ್ನು ಒದಗಿಸಲಿದೆ.
ಇತ್ತೀಚಿಗಷ್ಟೇ, ಇಂಡಿಗೋ ತನ್ನ ಮೊದಲ 787-9 ಡ್ರೀಮ್‌ಲೈನರ್‌ಗಳನ್ನು ನೋರ್ಸ್ ಅಟ್ಲಾಂಟಿಕ್ ಏರ್‌ವೇಸ್‌ನಿಂದ ವೆಟ್-ಲೀಸ್ ಮೂಲಕ ಪಡೆಯಲು ಮುಂದಾಗಿದೆ. ಮೊದಲ ಎರಡು ಡ್ರೀಮ್‌ಲೈನರ್‌ಗಳು 2025ರ ಫೆಬ್ರವರಿ ವೇಳೆಗೆ ಇಂಡಿಗೋ ಫ್ಲೀಟ್‌ಗೆ ಸೇರುವ ನಿರೀಕ್ಷೆಯಿದೆ. 2025ರ ಸೆಪ್ಟೆಂಬರ್ ವೇಳೆಗೆ, ಆರು 787-9 ವಿಮಾನಗಳು ಇಂಡಿಗೋ ಫ್ಲೀಟ್‌ನಲ್ಲಿ ಸೇರಲಿವೆ ಅದೇ ರೀತಿ ಇಂಡಿಕೋ ಏರ್‌ಬಸ್ A350 ವಿಮಾನಗಳನ್ನು ಸಹ ಪಡೆಯಲು ಯೋಜಿಸಿದೆ, ಇದು ದೀರ್ಘ ದೂರದ ವಿಮಾನಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮುಂಬೈ ಮತ್ತು ಮ್ಯಾಂಚೆಸ್ಟರ್ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಮುಂಬೈ (BOM) ಮತ್ತು ಮ್ಯಾಂಚೆಸ್ಟರ್ (MAN) ನಡುವಿನ ಪ್ರಯಾಣಿಕರ ಸಂಖ್ಯೆ 2023ರಲ್ಲಿ 69,000 ಕ್ಕೆ ತಲುಪಿದ್ದು, ಇದು ಮಾರುಕಟ್ಟೆಯಲ್ಲಿನ ದೊಡ್ಡ ಬೇಡಿಕೆಯನ್ನು ತೋರಿಸುತ್ತದೆ. ದೆಹಲಿ (DEL ) ಮತ್ತು ಮ್ಯಾಂಚೆಸ್ಟರ್ (MAN) 57,000 ಪ್ರಯಾಣಿಕರೊಂದಿಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.