ರಿಯಾದ್: ಜನವರಿ 14, 2023 ರಿಂದ, ಸೌದಿ ಅರೇಬಿಯಾವು ಭಾರತೀಯ ವೀಸಾ ಅರ್ಜಿದಾರರ ವೃತ್ತಿಪರ ಮತ್ತು ಶೈಕ್ಷಣಿಕ ಅರ್ಹತೆಗಳ ಪೂರ್ವ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಮೊದಲಿಗೆ, ಎಲೆಕ್ಟ್ರಿಷಿಯನ್, ಪ್ಲಂಬರ್, ವೆಲ್ಡರ್ ಮತ್ತು HVAC ತಂತ್ರಜ್ಞರು ಸೇರಿದಂತೆ 19 ವೃತ್ತಿಗಳಿಗೆ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಆದರೆ ಈಗ ಇದನ್ನು ಎಲ್ಲಾ ಉದ್ಯೋಗ ವೀಸಾ ಅರ್ಜಿದಾರರಿಗೆ ವಿಸ್ತರಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ವೀಸಾ ಮಂಜೂರಾಗುವ ಮೊದಲು, ಅರ್ಜಿದಾರರ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು, The New Indian Express ವರದಿಯ ಪ್ರಕಾರ, ಸೌದಿ ಅಂಬಾಸಿ ಭಾರತದಲ್ಲಿ ವೀಸಾ ಮಂಜೂರಿಗಾಗಿ ವೃತ್ತಿಪರ ಪರಿಶೀಲನೆ ಪ್ರಕ್ರಿಯೆಯನ್ನು ಜನವರಿ 14 ರಿಂದ ಜಾರಿಗೊಳಿಸಲಿದ್ದಾರೆಂದು ತಿಳಿಸಿದೆ.
ಈ ಹೊಸ ನಿಯಮಗಳ ಮೂಲಕ ಅನರ್ಹ ಮತ್ತು ಅನುಭವವಿಲ್ಲದ ಭಾರತೀಯ ಕಾರ್ಮಿಕರು ಸೌದಿ ಕಾರ್ಮಿಕ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ತಡೆಯುವುದು ಮತ್ತು ವಿದೇಶಿ ಕಾರ್ಮಿಕರ ಶೈಕ್ಷಣಿಕ ಪ್ರಮಾಣಪತ್ರಗಳನ್ನು ದೃಢೀಕರಿಸುವುದು ಸೌದಿ ಅರೇಬಿಯಾದ ಗುರಿಯಾಗಿದೆ. ಸೌದಿ ವ್ಯವಹಾರಗಳ ಸಚಿವಾಲಯದ ಪ್ರಕಾರ ಬಾಂಗ್ಲಾದೇಶದ ನಂತರ ಸೌದಿ ಅರೇಬಿಯಾದಲ್ಲಿ 2.4 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿರುವ ಭಾರತೀಯರು ಸೌದಿ ಅರೇಬಿಯಾದಲ್ಲಿ ಎರಡನೇ ಅತಿ ದೊಡ್ಡ ವಿದೇಶಿ ಕಾರ್ಮಿಕ ಸಮುದಾಯವಾಗಿದೆ. ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾ ಪಡೆಯಲು ಇಚ್ಛಿಸುವ ಭಾರತೀಯರು, ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳನ್ನು ಪೂರ್ವ ಪರಿಶೀಲನೆ ಮಾಡಿಸಿಕೊಂಡು, ನಿಗದಿತ ದಾಖಲಾತಿಗಳನ್ನು ತಯಾರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಜನವರಿ 14 ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿವೆ