ಕಳೆದ ವಾರ ನಾವು ಆಸ್ಟ್ರೇಲಿಯನ್ ಮೇಟ್ಸ್ ವೀಸಾ ಅವಕಾಶಗಳ ಬಗ್ಗೆ ನಾವು ಪ್ರಕಟಿಸಿದ್ದೆವು ಮತ್ತು ಅನೇಕ ಯುವಕರಿಗೆ ಈ ನ್ಯೂಸ್ ಪ್ರಯೋಜನಕಾರಿಯಾಗಿದೆ. ಈಗ ನಾವು ಜರ್ಮನಿ ವೀಸಾ ಅವಕಾಶಗಳ ಬಗ್ಗೆ ಮತ್ತೊಂದು ಉತ್ತೇಜಕ ನ್ಯೂಸ್‌ನೊಂದಿಗೆ ಬಂದಿದ್ದೇವೆ. ಜರ್ಮನಿ 2025ರಲ್ಲಿ 2,00,000 ಕೌಶಲ್ಯ ಕಾರ್ಮಿಕ (Skilled Workers) ವೀಸಾಗಳನ್ನು ನೀಡಲು ಯೋಜಿಸಿದೆ, ಇದು 2024ರ 1,77,000 ವೀಸಾಗಳ ಹೋಲಿಕೆಯಲ್ಲಿ 10% ಹೆಚ್ಚಾಗಿದೆ. ಈ ಯೋಜನೆ ಆರೋಗ್ಯ, ಇಂಜಿನಿಯರಿಂಗ್, ಐಟಿ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಕಾರ್ಮಿಕ ಕೊರತೆಯನ್ನು ಭರ್ತಿ ಮಾಡಲು ಜರ್ಮನಿ ಉದ್ದೇಶಿಸಿದೆ.
ವೀಸಾ ಅರ್ಜಿ ಸಲ್ಲಿಕೆ ವಿವರ :
ಆನ್‌ಲೈನ್ ಅರ್ಜಿ: ಜರ್ಮನ್ ಕೌನ್ಸುಲರ್ ಸೇವಾ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
Link ಇಲ್ಲಿದೆ https://digital.diplo.de/chancenkarte?utm_source=chatgpt.com
ಅಗತ್ಯ ದಾಖಲೆಗಳು
Valid passport
Proof of qualifications
Employment contract
Proof of language proficiency
Proof of sufficient financial proof
ವೀಸಾ ಸಂದರ್ಶನ:
ಭಾರತದ ಜರ್ಮನ್ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.
ವೀಸಾ ಅರ್ಜಿಯ ಪ್ರಕ್ರಿಯೆ
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ ಅಥವಾ equivalent professional experience
ಭಾಷಾ ಕೌಶಲ್ಯ: ಜರ್ಮನ್ ಭಾಷೆಯಲ್ಲಿ A1 ಅಥವಾ ಇಂಗ್ಲಿಷ್‌ನಲ್ಲಿ B2 ಮಟ್ಟದ ಪ್ರಾವೀಣ್ಯತೆ (ಉದ್ಯೋಗದ ಅವಶ್ಯಕತೆಯ ಮೇಲೆ ಅವಲಂಬಿತ)(CEFR)
ಉದ್ಯೋಗ ಒಪ್ಪಂದ: ಜರ್ಮನಿಯ ಉದ್ಯೋಗಿದಾರರಿಂದ ಉದ್ಯೋಗ ಒಪ್ಪಂದವನ್ನು ಪಡೆಯುವುದು ಮುಖ್ಯ (employment contract from a German employer)
Opportunity Card : ಜರ್ಮನಿ ತನ್ನ ದೇಶಕ್ಕೆ ಕೌಶಲ್ಯಶೀಲ ಉದ್ಯೋಗಾರ್ಥಿಗಳನ್ನು ಆಕರ್ಷಿಸಲು “Opportunity ಕಾರ್ಡ್” ಎಂಬ ಹೊಸ ಪಾಯಿಂಟ್ಸ್-ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯು ಉದ್ಯೋಗದ ಮುಂಗಡ ಪ್ರಸ್ತಾಪವಿಲ್ಲದೆ (Job Offer) ದೇಶಕ್ಕೆ ಬರಲು ಬಯಸುವ ವೃತ್ತಿಪರರಿಗೆ ಅವಕಾಶ ನೀಡುತ್ತದೆ.
ಅಭ್ಯರ್ಥಿಗಳನ್ನು ಅವರ ಅರ್ಹತೆಗಳು, ಭಾಷಾ ಪ್ರಾವೀಣ್ಯತೆ, ಕೆಲಸದ ಅನುಭವ ಮತ್ತು ವಯಸ್ಸು ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಈ ಕಾರ್ಡ್‌ನೊಂದಿಗೆ, ಅರ್ಹ ಅಭ್ಯರ್ಥಿಗಳು ಜರ್ಮನಿಗೆ ತೆರಳಿ, ಉದ್ಯೋಗವನ್ನು ಹುಡುಕಿಕೊಳ್ಳಲು ಮತ್ತು ನೆಲೆಸಲು ಅವಕಾಶವನ್ನು ಪಡೆಯುತ್ತಾರೆ.
Opportunity Card ಕಾರ್ಡ್‌ಗೆ ಅರ್ಜಿ ಪ್ರಕ್ರಿಯೆ: ಅರ್ಹತೆಯನ್ನು ಪರಿಶೀಲಿಸಲು “ಸೆಲ್ಫ್-ಚೆಕ್ ವೆಬ್ಸೈಟಿನಲ್ಲಿ ನಿಮ್ಮ ವಿವರಗಳನ್ನು ಭರ್ತಿಗೊಳಿಸಿ
https://www.make-it-in-germany.com/en/visa-residence/self-check-opportunity-card?utm_source=chatgpt.com
ದಾಖಲೆಗಳ ವಿವರ: proof of qualifications, language skills, and financial stability
ಅರ್ಜಿ ಸಲ್ಲಿಕೆ: ಆನ್‌ಲೈನ್‌ನಲ್ಲಿ ಅಥವಾ ಸ್ಥಳೀಯ ಜರ್ಮನ್ ಕಾನ್ಸುಲೇಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು
ಆರ್ಥಿಕ ಪುರಾವೆ : ಉದ್ಯೋಗ ಸಿಗುವವರೆಗೂ ನಿಮ್ಮನ್ನು ನೀವು ನೋಡಿಕೊಳ್ಳಲು ಬೇಕಾದಷ್ಟು ಹಣವಿದೆ ಎಂದು ತೋರಿಸಬೇಕು.
ಹೆಚ್ಚಿನ ಮಾಹಿತಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ https://www.make-it-in-germany.com/en/