ಕಾಸರಗೋಡು: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ) ಕಾಸರಗೋಡು ಡೀನರಿ ಹಾಗೂ ಕ್ರೈಸ್ಟ್ ಕಿಂಗ್ ಯೂತ್ ಮೂವ್‌ಮೆಂಟ್ (ಸಿಕೆವೈಎಂ) ಕಯ್ಯಾರ್ ಘಟಕದ ಸಹಯೋಗದಲ್ಲಿ ಆಯೋಜಿಸಿರುವ ಕಲೋತ್ಸವ-2025 ಜನವರಿ 11 ಮತ್ತು 12 ರಂದು ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಮೈದಾನದಲ್ಲಿ ನಡೆಯಲಿದ್ದು, ಈ ಎರಡು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ಹಾಡು, ನೃತ್ಯ, ಸ್ಪರ್ಧೆಗಳು, ಆಹಾರ ಕೌಂಟರ್, ಆಟೋಟ ಸ್ಪರ್ಧೆಗಳು, ಡಿಜೆ ಮತ್ತು ಮನರಂಜನೆಯ ಚಟುವಟಿಕೆಗಳು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾಗಿ, ಪ್ರೇಕ್ಷಕರಿಗೆ ಮೆರುಗನ್ನು ನೀಡಲಿವೆ
ಜನವರಿ 11: ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾ. ಅಶ್ವಿನ್ ಲೋಹಿತ್ ಕಾರ್ಡೋಜ ಅವರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದಾಯ್ಜಿ ವಲ್ಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಚಿತ್ರ ನಟಿ ವೆನ್ಸಿಟಾ ಡಯಾಸ್, ಕುಂಬಳೆ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ವಿನೋದ್ ಕುಮಾರ್, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ. ಮೆಲ್ವಿನ್ ಫೆರ್ನಾಲ್ ಉಪಸ್ಥಿತರಿರುವರು. ವೇದಿಕೆಯಲ್ಲಿ ಫಾ. ವಿಶಾಲ್ ಮೋನಿಸ್, ಅನಿಮೇಟರ್ ಸಿಸ್ಟರ್ ಸೆವ್ರಿನ್ ಡಿ ಕುನ್ಹಾ, ಮೆಲ್ವಿನ್ ಡಿ ಸೋಜ, ನೀಮಾ ಡಿ ಸಿಲ್ವಾ, ರೋಶನ್ ಡಿ ಸೋಜ, ಝೀನಾ ಡಿ ಸೋಜ, ಸಿಕೆವೈಎಂ ಅಧ್ಯಕ್ಷ ಪ್ರೀಮಲ್ ಡಿ ಸೋಜ, ಕಾರ್ಯದರ್ಶಿ ಜೋಯಲ್ ಕಿಶನ್ ಮೊದಲಾದವರು ಭಾಗವಹಿಸುವರು.
ಜನವರಿ 12:
ಆ ದಿನದ ಕಾರ್ಯಕ್ರಮಕ್ಕೆ ಕಾಸರಗೋಡು ವಲಯ ವಿಗಾರ್ ಫಾ. ಸ್ಟ್ಯಾನಿ ಪಿರೇರಾ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ದಾಯ್ಜಿ ವಲ್ಡ್‌ನ ಪ್ರೊಡಕ್ಷನ್ ಡೈರೆಕ್ಟರ್ ಸ್ಟ್ಯಾನಿ ಬೇಳ, ಚಿತ್ರ ನಟಿ ಅಶ್ವಿನಿ ಡಿ ಕೋಸ್ಟ, ಕನ್ನಡ ಬಿಗ್ ಬಾಸ್ ಖ್ಯಾತಿಯ ರೀಮಾ ಡಯಾಸ್, ಮಂಗಳೂರು ವಿ-ಟೆಕ್‌ನ ಪ್ರೊಪ್ರೈಟರ್ ನವೀನ್ ಡಿ ಸೋಜ, ಮಂಜೇಶ್ವರ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ರಜೀಶ್ ತೆರುವತ್ ಪೀಡಿಕಾಯಿಲ್ ಭಾಗವಹಿಸುವರು.
ಕಾರ್ಯಕ್ರಮದ ವೇಳಾಪಟ್ಟಿ:
ಜನವರಿ 11: ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ.
ಜನವರಿ 12: ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10.30 ರವರೆಗೆ.
ಈ ಸಾಂಸ್ಕೃತಿಕ ಹಬ್ಬಕ್ಕೆ ಕಾಸರಗೋಡು ವಲಯದ 16 ಚರ್ಚ್‌ಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದು, ಕಾರ್ಯಕ್ರಮದ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಐಸಿವೈಎಂ ವಲಯ ನಿರ್ದೇಶಕ ಫಾ. ವಿಶಾಲ್ ಮೋನಿಸ್ ತಿಳಿಸಿದ್ದಾರೆ. ಈ ಕಲೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.