ಯುನೈಟೆಡ್ ಕಿಂಗ್ಡಮ್‌ನ McDonald’s ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಕಳೆದ 12 ತಿಂಗಳಲ್ಲಿ 29 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಕಂಪನಿಯ ಮುಖ್ಯಸ್ಥ ಅಲಿಸ್ಟರ್ ಮ್ಯಾಕ್ರೋ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಕೆಲಸದ ಸ್ಥಳದಲ್ಲಿ ಅಸಹ್ಯಕರ ವರ್ತನೆಗೆ ಯಾವುದೇ ರೀತಿಯ ಸ್ಥಾನವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಬಿಬಿಸಿಯ ವರದಿ ಪ್ರಕಾರ, ಕಂಪನಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಪ್ರಕರಣಗಳು ವರದಿಯಾಗಿದ್ದು, . 2023ರಲ್ಲಿ ಬಿಬಿಸಿಯು ಮೆಕ್ಡೊನಾಲ್ಡ್ಸ್ ಸಂಸ್ಥೆಯ ಮೇಲೆ ನಡೆಸಿದ ತನಿಖೆಯ ನಂತರ 160 ಕಿರುಕುಳ ಪ್ರಕರಣಗಳು ಮತ್ತು ಯುಕೆ ಈಕ್ವಾಲಿಟಿ ವಾಚ್‌ಡಾಗ್ 300 ಕಿರುಕುಳ ಘಟನೆಗಳನ್ನು ವರದಿ ಮಾಡಿವೆ.
ಕಾರ್ಮಿಕರು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಕೆಲಸ ಮಾಡುವ ಪರಿಸರವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ”, ಕೆಲಸದ ಸ್ಥಳದಲ್ಲಿ ಅಸಹ್ಯಕರ ವರ್ತನೆಗೆ ಯಾವುದೇ ರೀತಿಯ ಸ್ಥಾನವಿಲ್ಲವೆಂದು ಮಿಸ್ಟರ್ ಮ್ಯಾಕ್ರೋ ಸ್ಪಷ್ಟಪಡಿಸಿದ್ದಾರೆ