ಲಿವರ್‌ಪೂಲ್ ಫುಟ್ಬಾಲ್ ಕ್ಲಬ್ ಖರೀದಿಸುವ ಆಸಕ್ತಿ ಬಗ್ಗೆ ಬಿಲಿಯನೇರ್ ಎಲನ್ ಮಸ್ಕ್ (Elon Musk ) ಅವರ ತಂದೆ ಎರೋಲ್ ಮಸ್ಕ್ ಬಹಿರಂಗಪಡಿಸಿದ್ದಾರೆ. ಎಲನ್ ಮಸ್ಕ್, $400 ಬಿಲಿಯನ್‌ಗಿಂತ ಹೆಚ್ಚು ಆಸ್ತಿಯನ್ನು ಹೊಂದಿರುವ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಟೆಸ್ಲಾ, ಸ್ಪೇಸ್‌ಎಕ್ಸ್, ಮತ್ತು X (ಹಿಂದಿನ ಟ್ವಿಟರ್) ಸೇರಿದಂತೆ ಹಲವು ದೊಡ್ಡ ಕಂಪನಿಗಳ ಒಡೆಯರಾಗಿದ್ದಾರೆ. ಪ್ರಸ್ತುತ, ಲಿವರ್‌ಪೂಲ್ ಕ್ಲಬ್ ಅಮೇರಿಕನ್ ಸ್ಪೋರ್ಟ್ಸ್ ಸಂಸ್ಥೆ ಫೆನ್‌ವೇ ಸ್ಪೋರ್ಟ್ಸ್ ಗ್ರೂಪ್ (FSG) ಮಾಲೀಕತ್ವದಲ್ಲಿದೆ.
2010ರಲ್ಲಿ ಅಮೇರಿಕನ್ ಸ್ಪೋರ್ಟ್ಸ್ ಸಂಸ್ಥೆ ಲಿವರ್‌ಪೂಲ್ ಕ್ಲಬ್ ನ್ನು ಖರೀದಿಸಿತ್ತು. 300 ಮಿಲಿಯನ್ ಪೌಂಡ್‌ಗಳಿಗೆ ಖರೀದಿಸಿದ ಈ ಕ್ಲಬ್ ಈಗ $5 ಬಿಲಿಯನ್‌ಗಿಂತ ಹೆಚ್ಚು ಮೌಲ್ಯ ಹೊಂದಿದೆ. FSG ಅವರ ನೇತೃತ್ವದಲ್ಲಿ ಲಿವರ್‌ಪೂಲ್ ಪ್ರೀಮಿಯರ್ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಗೆದ್ದಿದೆ
022ರಲ್ಲಿ ಮಸ್ಕ್ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುವ ಬಗ್ಗೆ ಹೇಳಿಕೆ ನೀಡಿದ್ದರು, ಆದರೆ ನಂತರ ನಾನು ಯಾವುದೇ ಕ್ರೀಡಾ ತಂಡಗಳನ್ನು ಖರೀದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಸ್ಕ್ ಅವರ ತಂದೆ ಟೈಮ್ಸ್ ರೇಡಿಯೋಗೆ ನೀಡಿದ ಸಂದರ್ಶನಒಂದರಲ್ಲಿ , ಲಿವರ್‌ಪೂಲ್ ಅನ್ನು ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಎರೋಲ್ ಮಸ್ಕ್ ಅವರ ಮಾತುಗಳ ಪ್ರಕಾರ, “ಅವರ ಅಜ್ಜಿ ಲಿವರ್‌ಪೂಲ್‌ನಲ್ಲಿ ಜನಿಸಿದ್ದರು. ನನ್ನ ಕುಟುಂಬದ ಕೆಲವು ಸದಸ್ಯರು ಬೀಟಲ್ಸ್ ತಂಡದಲ್ಲಿದ್ದು , ಅವರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಹೀಗಾಗಿ, ನಮ್ಮ ಕುಟುಂಬಕ್ಕೆ ಲಿವರ್‌ಪೂಲ್ ಪ್ರಿಯವಾಗಿದೆ ಎಂದಿದ್ದಾರೆ.