ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು 2015ರಲ್ಲಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ರಾಜೀನಾಮೆಯ ಕಾರಣಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಇತ್ತೀಚಿನ ಚುನಾವಣಾ ಫಲಿತಾಂಶಗಳಲ್ಲಿ ಲಿಬರಲ್ ಪಕ್ಷವು ತಳಹದಿಯ ಮಟ್ಟದಲ್ಲಿ ಬೆಂಬಲ ಕಳೆದುಕೊಂಡಿರುವುದು, ಮತ್ತು ಸಾರ್ವಜನಿಕ ಆಕ್ರೋಶ, ಈ ನಿರ್ಧಾರವನ್ನು ಪ್ರೇರೇಪಿಸಿರುವುದಾಗಿ ಅಂದಾಜಿಸಲಾಗಿದೆ. ಟ್ರುಡೋ ಅವರ ರಾಜೀನಾಮೆಯ ನಂತರ, ಕೆನಡಾದ ರಾಜಕೀಯ ವಲಯದಲ್ಲಿ ಮುಂದಿನ ನಾಯಕತ್ವದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಲಿಬರಲ್ ಪಕ್ಷವು ಮುಂದಿನ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸುವ ನಿರೀಕ್ಷೆಯಿದೆ
ಟ್ರುಡೋ ಅವರು ಸಾಮಾಜಿಕ ನ್ಯಾಯ, ಪರಿಸರ ರಕ್ಷಣಾ ನೀತಿಗಳು, ಮತ್ತು ಜನಪರ ಚಟುವಟಿಕೆಗಳಿಂದ ವಿಶ್ವದ ಗಮನ ಸೆಳೆದಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರ ಆಡಳಿತವು ವಿವಿಧ ಸವಾಲುಗಳನ್ನು ಎದುರಿಸಿತು. 2015ರಲ್ಲಿ ಟ್ರುಡೋ ಅಧಿಕಾರಕ್ಕೆ ಬಂದಾಗ, ಭಾರತ ಕೆನಡಾ ಎರಡೂ ದೇಶಗಳ ಆತ್ಮೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯನ್ನು ಹೊಂದಿದ್ದವು. ಆದರೆ, ಕೆಲವೊಂದು ವಿಷಯಗಳಲ್ಲಿ ಉದ್ಭವಿಸಿದ ಪರಸ್ಪರ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳು ಈ ಸಂಬಂಧದವನ್ನು ಹದೆಗೆಡಿಸಿತ್ತು. ಮುಂದಿನ ನಾಯಕತ್ವವು ಈ ಬಿಕ್ಕಟ್ಟಿಗೆ ಉತ್ತಮ ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವೆಂಬ ನಿರೀಕ್ಷೆ ಇದೆ.