ಕಾಸರಗೋಡು ವಲಯ ಐಸಿವೈಎಂ (ICYM) ಮತ್ತು ಕಯ್ಯಾರ್ ಸಿಕೆವೈಎಂ (CKYM) ಜಂಟಿಯಾಗಿ ಆಯೋಜಿಸಿದ “ಕಲೋತ್ಸವ 2025” ಭರ್ಜರಿ ಯಶಸ್ಸು.
ಕಾಸರಗೋಡು ವಲಯ ಐಸಿವೈಎಂ (ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ICYM) ಮತ್ತು ಸಿಕೆವೈಎಂ (ಕ್ರೈಸ್ಟ್ ಕಿಂಗ್ ಯೂತ್ ಮೂವ್‌ಮೆಂಟ್ CKYM) ಕಯ್ಯಾರ್ ಜಂಟಿಯಾಗಿ ಆಯೋಜಿಸಿದ್ದ “ಕಲೋತ್ಸವ 2025” ಜನವರಿ 11 ಮತ್ತು 12 ರಂದು ಕಯ್ಯಾರ್ ಕ್ರೈಸ್ಟ್ ಕಿಂಗ್ ಚರ್ಚ್‍ನಲ್ಲಿ ಭರ್ಜರಿಯಾಗಿ ನಡೆಯಿತು. ಕಾಸರಗೋಡು ವಲಯದ 16 ಚರ್ಚುಗಳ ಹಿರಿಯರು, ಮಕ್ಕಳು, ಯುವಕ ಯುವತಿಯರು ಈ ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಾವಿರಾರು ಜನರು ಈ ಕಲೋತ್ಸವವನ್ನು ವೀಕ್ಷಿಸಲು ಆಗಮಿಸಿದ್ದು, ಉತ್ಸವವು ಅಪಾರ ಯಶಸ್ಸನ್ನು ಕಂಡಿತು. ಉತ್ಸಾಹಭರಿತ ಸ್ಪರ್ಧೆ ಮತ್ತು ಸಂಭ್ರಮದ ನಡುವೆ, ಉತ್ಸಾಹದಿಂದ ಕೂಡಿದ ಕಾರ್ಯಕ್ರಮದಲ್ಲಿ ನರಂಪಾಡಿ ಚರ್ಚ್ ಒಟ್ಟಾರೆ ಚಾಂಪಿಯನ್ಶಿಪ್ ಪಡೆದರೆ, ವರ್ಕಾಡಿ ಚರ್ಚ್ ಎರಡನೇ ಸ್ಥಾನ ಮತ್ತು ಕಯ್ಯಾರ್ ಚರ್ಚ್ ಮೂರನೇ ಸ್ಥಾನವನ್ನು ಗಳಿಸಿತು.
ಈ ಮನೋರಂಜನಾತ್ಮಕ ಕಾರ್ಯಕ್ರಮವು ಭಾಗವಹಿಸಿದವರ ಮತ್ತು ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.