ಭಾರತದ ಭೂಭಾಗದಲ್ಲಿ ಚೀನಾ ಹೊಸ ಜಿಲ್ಲೆಗಳ ಸ್ಥಾಪನೆ. ಚೀನಾ, ಭಾರತದ ಅಕ್ಸೈಚಿನ್ ಪ್ರದೇಶದ ಜಿನ್ಜಿಯಾಂಗ್ ಪ್ರಾಂತ್ಯದಲ್ಲಿ ಹೊಸ ಜಿಲ್ಲೆಗಳ ಸ್ಥಾಪನೆ ಘೋಷಿಸಿದೆ. ಈ ಪ್ರದೇಶವು ಭಾರತದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿದೆ. ಚೀನಾ ತನ್ನ ನೂತನ ಆಡಳಿತ ಭೂ ನಕ್ಷೆಯಲ್ಲಿ , ಅಕ್ಸೈಚಿನ್ ಪ್ರದೇಶವನ್ನು ಚೀನಾದ ಜಿನ್ಜಿಯಾಂಗ್ ಪ್ರಾಂತ್ಯದ ಭಾಗವಾಗಿ ಸೇರಿಸಿದೆ
ಗಡಿ ಪ್ರದೇಶದಲ್ಲಿ ಚೀನಾ ತೆಗೆದುಕೊಳ್ಳುತ್ತಿರುವ ಈ ಕ್ರಮವು 2020ರಲ್ಲಿ ಗಾಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆ ಮತ್ತು ನಂತರದ ಗಡಿ ಉದ್ವಿಗ್ನತೆಗಳ ಹಿನ್ನಲೆಯಲ್ಲಿ, ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಹದಗೆಸುವ ಸಾಧ್ಯತೆಯನ್ನು ತೋರಿಸುತ್ತದೆ.
ಚೀನಾ ತನ್ನ ಈ ಕಾರ್ಯವನ್ನು ಆಡಳಿತ ಸುಧಾರಣೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರೂ, ಇದು ಭಾರತದ ಪ್ರಾದೇಶಿಕ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಉಲ್ಲಂಘಿಸುತ್ತದೆ. ನವದೆಹಲಿಯು ಚೀನಾ ತನ್ನ ಪ್ರಾದೇಶಿಕ ನಿರ್ಧಾರಗಳನ್ನು ತಕ್ಷಣವೇ ಬಿಟ್ಟು, ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸಲು ಚರ್ಚೆಗೆ ಮುಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಗಡಿ ಪ್ರದೇಶದಲ್ಲಿ ಚೀನಾ ತೆಗೆದುಕೊಳ್ಳುತ್ತಿರುವ ಈ ಕ್ರಮವು 2020ರಲ್ಲಿ ಗಾಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆ ಮತ್ತು ನಂತರದ ಗಡಿ ಉದ್ವಿಗ್ನತೆಗಳ ಹಿನ್ನಲೆಯಲ್ಲಿ, ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಹದೆಗೆಟ್ಟಿಸಿದೆ. ಇದೇ ಸಮಯದಲ್ಲಿ, ಬಿಜೆಪಿ ಮಾಜಿ ಸಂಸತ್ತಿನ ಸದಸ್ಯ ಹಾಗು ಆರ್ಥಿಕಶಾಸ್ತ್ರಜ್ಞ ಮತ್ತು ಅಂಕಿಅಂಶ ತಜ್ಞರಾದ ಡಾ. ಸುಬ್ರಮಣ್ಯನ್ ಸ್ವಾಮಿ , ಭಾರತದ ಭೂಭಾಗವನ್ನು ಚೀನಾದ ಅಧ್ಯಕ್ಷ ಶಿ ಜಿನ್ಪಿಂಗ್ ಅವರಿಗೆ ಪ್ರಧಾನಿ ಮೋದಿಯವರು “ಉಡುಗೊರೆ“ಯಾಗಿ ನೀಡಿದ್ದಾರೆ ಎಂದು ಅವರ x (twitter) ಖಾತೆಯಲ್ಲಿ ಬರೆದಿದ್ದರೆ.