ಭಾರೀ ಹಿಮಪಾತದಿಂದಾಗಿ ಯುಕೆಯ ಹಲವು ವಿಮಾನ ನಿಲ್ದಾಣಗಳಲ್ಲಿ ರನ್ವೇಗಳು ಮುಚ್ಚಲಾಗಿದ್ದು, ದೇಶದ ಹಲವಾರು ಪ್ರದೇಶಗಳಿಗೆ ಅಂಬರ್ ವೆದರ್ (Amber weather ) ವಾರ್ನಿಂಗ್ಗಳು ಜಾರಿಯಲ್ಲಿವೆ. ಮ್ಯಾಂಚೆಸ್ಟರ್, ಲಿವರ್ಪೂಲ್ ಜಾನ್ ಲೆನನ್ ಮತ್ತು ಲೀಡ್ಸ್ ಬ್ರಾಡ್ಫೋರ್ಡ್ ವಿಮಾನ ನಿಲ್ದಾಣಗಳು ಇಂದು ಬೆಳಿಗ್ಗೆ ರನ್ವೇಗಳನ್ನು ಮುಚ್ಚಿದ್ದು, ಭಾರೀ ಹಿಮವನ್ನು ರಾತ್ರಿ ತೆರವುಗೊಳಿಸಲಾಯಿತು. ಬರ್ಮಿಂಗ್ಹ್ಯಾಮ್ ವಿಮಾನ ನಿಲ್ದಾಣವು ರಾತ್ರಿಯಿಂದಲೇ ಹಲವಾರು ಗಂಟೆಗಳ ಕಾಲ ‘ಹಿಮ ತೆರವು ಮತ್ತು ಸುರಕ್ಷತಾ ಕಾರಣಗಳಿಗಾಗಿ’ ಸ್ಥಗಿತಗೊಳಿಸಿತು
ಮೆಟ್ ಆಫೀಸ್ ಪ್ರಕಾರ ಕೆಲವು ಪ್ರದೇಶಗಳಲ್ಲಿ ರಾತ್ರಿಯಿಡೀ 12 ಸೆಂಟಿಮೀಟರ್ ವರೆಗೆ ಹಿಮ ಬಿದ್ದಿದೆ. ಸ್ಕಾಟ್ಲೆಂಡ್ನ ಲೋಚ್ ಗ್ಲಾಸ್ಕರ್ನೋಚ್ನಲ್ಲಿ -11C ಗರಿಷ್ಠ ತಾಪಮಾನ ದಾಖಲಾಗಿದೆ. ಮ್ಯಾಂಚೆಸ್ಟರ್, ಲಿವರ್ಪೂಲ್ ಮತ್ತು ಬರ್ಮಿಂಗ್ಹ್ಯಾಮ್ನಲ್ಲಿನ ರನ್ವೇಗಳು ಈಗ ವಿಮಾನ ಸಂಚಾರಕ್ಕೆ ಸುಗಮಗೊಳಿಸಲಾಗಿದೆ, ಮಧ್ಯಾಹ್ನ ಲೀಡ್ಸ್ ಬ್ರಾಡ್ಫೋರ್ಡ್ನ ರನ್ವೇ ತೀವ್ರ ಹಿಮಪಾತದಿಂದಾಗಿ ಮುಂದಿನ ನೋಟಿಸ್ವರೆಗೆ ಮುಚ್ಚಲಾಗಿದೆ.ಬ್ರಿಸ್ಟೋಲ್ ವಿಮಾನ ನಿಲ್ದಾಣಕ್ಕೆ ಹೋಗುವ ಹಲವಾರು ವಿಮಾನಗಳು ರಾತ್ರಿಯಿಂದಲೇ ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲ್ಪಟ್ಟವು, ಅದರ ರನ್ವೇಗಳು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಈಗ ಸುಮಾರು 11 ಗಂಟೆಗೆ ವಿಮಾನ ಸಂಚಾರಕ್ಕೆ ಸುಗಮಗೊಲಿದೆ.
ಯುಕೆ ಹೆಲ್ತ್ ಏಜೆನ್ಸಿ ಕೋಲ್ಡ್ ಹೆಲ್ತ್ ಅಲರ್ಟ್ ಹೊರಡಿಸಿದೆ ಈ ಮಧ್ಯೆ, ಸಮೀಪದ ಸೊಮರ್ಸೆಟ್ನ ವೆಸ್ಟನ್-ಸೂಪರ್-ಮೇರ್ ಮತ್ತು ಟೌಂಟನ್ ನಡುವಿನ M5 ಮೋಟಾರ್ವೇನಲ್ಲಿ ‘ಹಲವಾರು ವಾಹನಗಳ ಡಿಕ್ಕಿಗಳು’ ಸಂಭವಿಸಿವೆ, ಇದರ ಪರಿಣಾಮವಾಗಿ ರಸ್ತೆಗಳು ಮುಚ್ಚಲ್ಪಟ್ಟಿವೆ.