ಭಾರತದ ಮುಖ್ಯಮಂತ್ರಿಗಳ ಆಸ್ತಿ-ಪಾಸ್ತಿಗಳ ಕುರಿತು ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಅಧ್ಯಯನವು ದೇಶದ ರಾಜಕೀಯ ನಾಯಕರ ಆರ್ಥಿಕ ಸ್ಥಿತಿಯಲ್ಲಿ ಅನೇಕ ವಿಭಿನ್ನತೆಯನ್ನು ತೋರಿಸಿದೆ. ಮುಖ್ಯಮಂತ್ರಿಗಳ ಘೋಷಿತ ಆಸ್ತಿ, ಸಾಲದ ವಿವರಗಳು ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪ್ರಮಾಣಪತ್ರಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ.
ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ (ADR) ವರದಿಯ ಪ್ರಕಾರ, ₹15.38 ಲಕ್ಷ ಮೌಲ್ಯದ ಆಸ್ತಿ ಹೊಂದಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಭಾರತದಲ್ಲಿ ಅತ್ಯಂತ ‘ಬಡ’ ಮುಖ್ಯಮಂತ್ರಿಯೆಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಅವರ ಒಟ್ಟು ಘೋಷಿತ ಆಸ್ತಿ ₹55 ಲಕ್ಷ, ಮತ್ತು ಕೇರಳದ ಪಿಣರಾಯಿ ವಿಜಯನ್ ಅವರ ಘೋಷಿತ ಆಸ್ತಿ ₹1.18 ಕೋಟಿ. ಈ ಇಬ್ಬರು ಕ್ರಮವಾಗಿ ಎರಡನೇ ಮತ್ತು ಮೂರನೇ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳಾಗಿದ್ದಾರೆ.
ಹೆಚ್ಚಿನ ಆಸ್ತಿಯ ಮುಖ್ಯಮಂತ್ರಿಗಳು: ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ₹931 ಕೋಟಿ ಮೌಲ್ಯದ ಆಸ್ತಿಗಳೊಂದಿಗೆ ದೇಶದ ಅತ್ಯಂತ ಶ್ರಿಮಂತ ಮುಖ್ಯಮಂತ್ರಿಯಾಗಿ ಬಿಂಬಿತರಾಗಿದ್ದಾರೆ. ಅರುಣಾಚಲ ಪ್ರದೇಶದ ಪೆಮಾ ಖಾಂಡು ₹332 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಸಿದ್ದರಾಮಯ್ಯ ₹51 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಈ ವರದಿಯು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕೆಲವರು ಮುಖ್ಯಮಂತ್ರಿಯ ಸರಳತೆಯನ್ನು ಶ್ಲಾಘಿಸಿದರೆ, ಇತರರು ಅವರ ಆದಾಯದ ಮೂಲಗಳ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ