ಲಂಡನ್‌ನ ಬಾಂಡ್ ಸ್ಟ್ರೀಟ್‌ನ ಹಾಲ್ಸಿಯಾನ್ ಗ್ಯಾಲರಿಯ ಕಲಾಸಂಗ್ರಾಹಕಿ ಹಾಗೂ ಪ್ರಖ್ಯಾತ instagram ಇನ್‌ಫ್ಲುಯೆನ್ಸರ್ ಶಫಿರಾ ಹುವಾಂಗ್ ಅವರ ಮನೆಗೆ ದರೋಡೆಕೋರರು ನುಗ್ಗಿ, ಸುಮಾರು 12.4 ಮಿಲಿಯನ್ ಪೌಂಡ್ ಮೌಲ್ಯದ ಅಮೂಲ್ಯ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ದರೋಡೆಯಲ್ಲಿ 160,000 ಪೌಂಡ್ ಮೌಲ್ಯದ ಹರ್ಮೆಸ್ ಕ್ರೋಕೋಡೈಲ್ ಕೆಲ್ಲಿ (Hermes Crocodile Kelly ) ಹ್ಯಾಂಡ್‌ಬ್ಯಾಗ್, 15,000 ಪೌಂಡ್ ನಗದು ಹಾಗೂ 10 .4 ಮಿಲಿಯನ್ ಪೌಂಡ್ ಮೌಲ್ಯದ ವಿಶಿಷ್ಟ ವಿನ್ಯಾಸದ ಆಭರಣಗಳನ್ನು ಕಳವು ಮಾಡಲಾಗಿದೆ . ಕಳವುಗೊಂಡಿರುವ ಆಭರಣಗಳಲ್ಲಿ ಡಿ ಬಿಯರ್ಸ್ ಬಟರ್ಫ್ಲೈ (De Beers ) ಡೈಮಂಡ್ ರಿಂಗ್‌ಗಳು, ಕ್ಯಾಥರೀನ್ ವಾಂಗ್ (Katherine Wang ) ಅವರ ಪಿಂಕ್ ಸಫೈರ್ ಈರಿಂಗ್‌ಗಳು ಹಾಗೂ ವ್ಯಾನ್ ಕ್ಲೀಫ್‌ನ ( Van Cleef & Arpels) ಚಿನ್ನ, ವಜ್ರ ಮತ್ತು ಸಫೈರ್ ನೆಕ್ಲೇಸ್‌ಗಳು ಸೇರಿವೆ. ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು ದರೋಡೆಕೋರನು ಎರಡನೇ ಮಹಡಿಯ ಕಿಟಕಿಯ ಮೂಲಕ ಮನೆಗೆ ನುಗ್ಗಿದ್ದಾನೆ. ದರೋಡೆಕೋರನು ಮುಖವಾಡ ಧರಿಸಿದ್ದು 20ರಿಂದ 30ರ ವಯಸ್ಸಿನ, ದೇಹದ ವ್ಯಕ್ತಿಯಾಗಿದ್ದು. ಅವರು ಕಪ್ಪು ಹೂಡಿಯು,ಕಾರ್ಗೋ ಪ್ಯಾಂಟ್ ಮತ್ತು ಬೂದು ಬಣ್ಣದ Baseball cap ಧರಿಸಿದ್ದಾರೆಯೆಂದು ಮಾಹಿತಿ ಲಭಿಸಿದೆ.
ಈ ಕೃತ್ಯವು ಲಂಡನ್‌ನಲ್ಲಿ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳ ಒಂದು ಪ್ರಮುಖ ಉದಾಹರಣೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ, ಕಳ್ಳರನ್ನು ಪತ್ತೆಹಚ್ಚಲು ಮಾಹಿತಿ ನೀಡಿದವರಿಗೆ 5 ಲಕ್ಷ ಪೌಂಡ್ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ, ಕಳ್ಳತನವು ತನ್ನ ಕುಟುಂಬದ ಭದ್ರತೆಗೆ ಭಂಗವನ್ನು ಉಂಟುಮಾಡಿದ್ದು, ನ್ಯಾಯಕ್ಕಾಗಿ ಈ ಬಹುಮಾನವನ್ನು ಘೋಷಿಸಲಾಗಿದೆ ಎಂದು instagram ಇನ್‌ಫ್ಲುಯೆನ್ಸರ್ ಶಫಿರಾ ಹುವಾಂಗ್ ತಿಳಿಸಿದ್ದಾರೆ
ಲಾಯ್ಡ್ಸ್ ಬ್ಯಾಂಕ್‌ನ ಇತ್ತೀಚಿನ ಸಂಶೋಧನೆಯ ಪ್ರಕಾರ, ಲಂಡನ್‌ನ ಅವೆನ್ಯೂ ರಸ್ತೆಯು ಯುನೈಟೆಡ್ ಕಿಂಗ್‌ಡಮ್‌ನ ಅತ್ಯಂತ ದುಬಾರಿ ನಿವಾಸಿ ಬೀದಿಗಳಲ್ಲಿ ಒಂದಾಗಿದೆ.