ಆಸ್ಟ್ರೇಲಿಯಾ ಸರ್ಕಾರವು ಭಾರತೀಯ ಯುವ ಉದ್ಯೋಗಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಲು ಮೇಟ್ಸ್ (Mobility Arrangement for Talented Early-professionals Scheme – MATES) ವೀಸಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ 2024ರ ಡಿಸೆಂಬರ್ನಲ್ಲಿ ಪ್ರಾರಂಭವಾಗಿದ್ದು ಜನವರಿ 07 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಪ್ರತಿ ವರ್ಷ 3,000 ಭಾರತೀಯ ಯುವ ಉದ್ಯೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ.
ಮೇಟ್ಸ್ ವೀಸಾದ ಮುಖ್ಯ ಅರ್ಹತಾ ಮಾನದಂಡಗಳು
ವಯೋಮಿತಿ: 18 ರಿಂದ 30 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಪಡೆದಿರಬೇಕು.
ಈ ವೀಸಾ Renewable energy,Agriculture, Information and communication technology (ICT), Engineering, Health, Education,Financial technology, Artificial intelligence, Mining ಯಾವುದಾದರು ಕ್ಷೇತ್ರಗಳಲ್ಲಿ ಪದವಿ ಪಡೆದಿರಬೇಕು.
ಭಾಷಾ ಪರಿಣಿತಿ: ಅರ್ಜಿದಾರರು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು.
IELTS ಪರೀಕ್ಷೆಯಲ್ಲಿ ಒಟ್ಟು 6 ಅಂಕಗಳು ಮತ್ತು ಪ್ರತಿ ವಿಭಾಗದಲ್ಲಿ ಕನಿಷ್ಠ 5 ಅಂಕಗಳು ಅಗತ್ಯ
ವೀಸಾ ವಿವರಗಳು
ವೀಸಾ ಮಂಜೂರಾದ ದಿನಾಂಕದಿಂದ ಎರಡು ವರ್ಷಗಳವರೆಗೆ (24 ತಿಂಗಳು) ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಬಹುದು. ಮಲ್ಟಿಪಲ್ ಎಂಟ್ರಿ ಅಂದರೆ ವೀಸಾ ಅವಧಿಯಲ್ಲಿ Australia-ಯಿಂದ ಬಂದು ಹೋಗಲು ಸಾಧ್ಯ. ವೀಸಾ ಮಂಜೂರಾದ ನಂತರ 12 ತಿಂಗಳ ಒಳಗೆ ಆಸ್ಟ್ರೇಲಿಯಾದಲ್ಲಿ ಪ್ರವೇಶ ಮಾಡಬೇಕು
ಅರ್ಜಿಯ ಪ್ರಕ್ರಿಯೆ ಬಾಲಟ್ ಸಿಸ್ಟಮ್: MATES ವೀಸಾ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ಬಾಲಟ್ (ballot) ಎಂಬ ಪ್ರಕ್ರಿಯೆಯಲ್ಲಿ ನೋಂದಾಯಿಸಿಕೊಳ್ಳಬೇಕು.
ಪ್ರತಿ ವರ್ಷ 3,000 ವೀಸಾಗಳ ಮಿತಿಯಿರುವುದರಿಂದ, ಆಯ್ಕೆಯಾದ ಅರ್ಜಿದಾರರಿಗೆ ಮಾತ್ರ ವೀಸಾ ಅರ್ಜಿ ಸಲ್ಲಿಸಲು ಅವಕಾಶ ದೊರೆಯುತ್ತದೆ.
ಮೊದಲ ಬಾಲಟ್ 2024 ಡಿಸೆಂಬರ್ 9 ರಿಂದ 2025 ಜನವರಿ 7ರವರೆಗೆ ನಡೆಯಲಿದೆ.
ಆಯ್ಕೆಯಾದವರು ವೀಸಾ ಅರ್ಜಿ ಸಲ್ಲಿಸಲು ಆಹ್ವಾನ ಪಡೆಯುತ್ತಾರೆ
ವೀಸಾದ ವೆಚ್ಚ
ಬಾಲಟ್ ನೋಂದಣಿಗೆ ಶುಲ್ಕ: AUD 25.
ವೀಸಾ ಅರ್ಜಿಯ ಶುಲ್ಕ: AUD 365. (ಆಯ್ಕೆಯಾದವರು)
ಇತರೆ ವೆಚ್ಚಗಳು:ILTES ಪರೀಕ್ಷೆ ಮತ್ತು ವೀಸಾ ಪ್ರಕ್ರಿಯೆಗೆ ಸಂಬಂಧಿಸಿದ ಖರ್ಚುಗಳು. ವೀಸಾ ಹೊಂದಿರುವವರು ತಮ್ಮ ಪತ್ನಿ/ಪತಿ ಮತ್ತು ಅವಲಂಬಿತ ಮಕ್ಕಳನ್ನು ಕರೆತರಬಹುದು. ಅವಲಂಬಿತರು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಲು ಪ್ರಾಪ್ತರಾಗುತ್ತಾರೆ. MATES ವೀಸಾ ಅವಧಿ ಮುಗಿಯುವ ಮೊದಲು, ವೀಸಾಧಾರಕರು ತಾತ್ಕಾಲಿಕ ಅಥವಾ ಶಾಶ್ವತ (Permanent Residency) ವೀಸಾಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://immi.homeaffairs.gov.au/visas/getting-a-visa/visa-listing/temporary-work-403/mates ಸಂಪರ್ಕಿಸಿ