ಮೊರಿಸನ್ಸ್: morrisons ಮೋರ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಕೆಲವು ತರಕಾರಿಗಳು ಕೇವಲ 10 ಪೆನ್ಸ್ಗೆ ಲಭ್ಯವಿದೆ
ಹಬ್ಬದ ಸಮಯದಲ್ಲಿ ಮೀನುಪ್ರಿಯರಿಗಾಗಿ, ಮೊರಿಸನ್ಸ್ ಮಾರ್ಕೆಟ್ ಸ್ಟ್ರೀಟ್ ಸಂಪೂರ್ಣ ಸ್ಯಾಲ್ಮನ್ ಮೀನುಗಳನ್ನು ಕೇವಲ £7.50 ಪ್ರತಿ ಕೆ.ಜಿ.ಗೆ ಡಿಸೆಂಬರ್ 18 ರಿಂದ ಜನವರಿ 5 ರವರೆಗೆ ನೀಡುತ್ತಿದೆ.
“ಮೋರ್ ಕಾರ್ಡ್” ಸದಸ್ಯರು ಚಾರ್ಲ್ಸ್ ಡೆ ವಿಲ್ಲಿಯರ್ಸ್ ಶಾಂಪೇನ್ (75cl) ಬಾಟಲ್ ಅನ್ನು ಕೇವಲ £12.50 ಗೆ ಜನವರಿ 1 ರವರೆಗೆ ಖರೀದಿಸಬಹುದು.
LIDL (ಲಿಡ್ಲ್). ಲಿಡ್ಲ್ ಡಿಸೆಂಬರ್ 19 ರಿಂದ 24 ರವರೆಗೆ ಕ್ರಿಸ್ಮಸ್ ಹಬ್ಬದ ತರಕಾರಿಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಕೇವಲ 15 ಪೆನ್ಸ್ಗೆ ಈ ಕೆಳಗಿನ ತರಕಾರಿಗಳನ್ನು ಪಡೆಯಿರಿ: ಬ್ರಿಟಿಷ್ parsnips (500 ಗ್ರಾಂ)
ಬ್ರಿಟಿಷ್ ಕ್ಯಾರೆಟ್ (1 ಕೆಜಿ)
ಬ್ರಿಟಿಷ್ ಬ್ರಸೆಲ್ ಮೊಳಕೆ (500 ಗ್ರಾಂ)
ಶಲ್ಲೋಟ್ಸ್ (300 ಗ್ರಾಂ)
ಬ್ರಿಟಿಷ್ swede (ಪ್ರತಿ)
ಬಿಳಿ ಆಲೂಗಡ್ಡೆ (2 ಕೆಜಿ)
ಈ ಕೊಡುಗೆ ಯುಕೆಾದ್ಯಂತದ ಎಲ್ಲಾ ಲಿಡ್ಲ್ ಅಂಗಡಿಗಳಲ್ಲಿ ಲಭ್ಯವಿದೆ.
ಟೆಸ್ಕೋ (Tesco):
ಟೆಸ್ಕೋ ಈ ಬಾರಿ ಬಜೆಟ್ ಸ್ನೇಹಿ ಆಫರ್ಗಳನ್ನು ಪ್ರಾರಂಭಿಸಿದ್ದು, “Buy 1 Get 1 Free” ಅಥವಾ “Clubcard” ಸದಸ್ಯರಿಗೆ ಹೆಚ್ಚುವರಿ ರಿಯಾಯಿತಿಗಳನ್ನು ನೀಡುತ್ತಿದೆ. ವಿಶೇಷವಾಗಿ, ಶೃಂಗಾರ ದೀಪಗಳು, ಚಾಕೊಲೇಟ್ಗಳು ಮತ್ತು ಹಬ್ಬದ ಪಾಕವಿಧಾನಗಳಿಗೆ ಅಗತ್ಯ ವಸ್ತುಗಳ ಮೇಲೆ ವಿಶೇಷ ಬೆಲೆ ಕಡಿತ ನೀಡಲಾಗಿದೆ. Clubcard” ಸದಸ್ಯರಿಗೆ ಟರ್ಕಿ, ಕ್ರಿಸ್ಮಸ್ ಕೇಕ್, ಮತ್ತು ವೈನ್ಗಳ ಮೇಲೆ ಶೇ. 50ರಷ್ಟು ರಿಯಾಯಿತಿ.
ಆಲ್ಡಿ Aldi
ಆಫರ್: ಕ್ರಿಸ್ಮಸ್ ಹ್ಯಾಂಪರ್ಗಳು, ವೈನ್ಗಳು, ಮತ್ತು ಮೀಟ್ ಪ್ಯಾಕೇಜ್ಗಳ ಮೇಲೆ ಶೇ. 50ರಷ್ಟು ಕಡಿತ.
ವಿಶೇಷ: ಎಲ್ಲಾ ಗ್ರಾಹಕರಿಗೆ ಮಧ್ಯಾಹ್ನ 3 ಗಂಟೆಯವರೆಗೆ ಉಚಿತ ಶಾಪಿಂಗ್ ಬ್ಯಾಗ್ಗಳ ಒಫರ್.
ದಿನಾಂಕ ಮತ್ತು ಸಮಯ: ಡಿಸೆಂಬರ್ 24, ಬೆಳಗ್ಗೆ 8:00 ರಿಂದ ಮಧ್ಯಾಹ್ನ 4:00. ಸೂಪರ್ ಸಿಕ್ಸ್” ಕೊಡುಗೆಯಲ್ಲಿ ಕ್ಯಾರೆಟ್, parsnips, ಬ್ರಸೆಲ್ ಮೊಳಕೆ, ಬಿಳಿ ಆಲೂಗಡ್ಡೆ, red cabbage, White cabbage, ಬ್ರೊಕೊಲಿ ಕೇವಲ 8 ಪೆನ್ಸ್ಗೆ ಲಭ್ಯವಿದೆ!
ಅಸ್ಡಾ (Asda):
ಆಫರ್: “Rollback” ಪ್ರೋಮೋಶನ್ಗಳ ಮೂಲಕ ಪಾಕವಿಧಾನ ಪ್ಯಾಕೇಜ್ಗಳು ಮತ್ತು ಪಾರ್ಟಿ ಫುಡ್ಗಳ ಮೇಲೆ ಶೇ. 40ರಷ್ಟು ರಿಯಾಯಿತಿ.
ಕೆಲವು ತರಕಾರಿಗಳು ಕೇವಲ 8 ಪೆನ್ಸ್ಗೆ ಲಭ್ಯ
ದಿನಾಂಕ ಮತ್ತು ಸಮಯ: ಡಿಸೆಂಬರ್ 24, ಬೆಳಗ್ಗೆ 6:00 ರಿಂದ ಸಂಜೆ 7:00
ಮಾರ್ಕ್ಸ್ ಅಂಡ್ ಸ್ಪೆನ್ಸರ್ (M&S):
ಆಫರ್: ಕ್ರಿಸ್ಮಸ್ ಈವ್ ಡಿನ್ನರ್ ಸ್ಫೆಷಲ್ ಪ್ಯಾಕೇಜ್ಗಳು £20 ಒಳಗಾಗಿ ಲಭ್ಯ.
ವಿಶೇಷ: ಮಧ್ಯಾಹ್ನ 2 ಗಂಟೆಯ ನಂತರ “Last-Minute Deal”
ದಿನಾಂಕ ಮತ್ತು ಸಮಯ: ಡಿಸೆಂಬರ್ 24, ಬೆಳಗ್ಗೆ 7:00 ರಿಂದ ಮಧ್ಯಾಹ್ನ 4:00
ಕೋ-ಆಪ್: (CO-OP) ಕ್ಯಾರೆಟ್, ಬ್ರಸೆಲ್ ಮೊಳಕೆ, ಬ್ರೊಕೊಲಿ, ಪಾರ್ಸ್ನಿಪ್ಸ್, ಆಲೂಗಡ್ಡೆ ತಲಾ 25 ಪೆನ್ಸ್ಗೆ ಲಭ್ಯವಿದೆ
ಗ್ರಾಹಕರಿಗೆ ಸೂಚನೆ:
ಹಬ್ಬದ ದಿನಗಳಲ್ಲಿ ಸೂಪರ್ಮಾರ್ಕೆಟ್ ಮುಚ್ಚುವ ಸಮಯವನ್ನು ಗಮನಿಸಿ ಕೊನೆಯ ಕ್ಷಣದ ಶಾಪಿಂಗ್ಗಳನ್ನು ದೂರವಿಡಿ.
ಆನ್ಲೈನ್ ಆರ್ಡರ್ಗಳನ್ನು ಸಮಯಕ್ಕೆ ಮುಂಚೆಯೇ ಡೆಲಿವರಿಗಾಗಿ ಪ್ಲೇಸ್ ಮಾಡಿಕೊಳ್ಳಿ.
ಸೂಪರ್ಮಾರ್ಕೆಟ್ಗಳಲ್ಲಿನ ವಿಶೇಷ ಆಫರ್ಗಳನ್ನು ಆನ್ಲೈನ್ ಮೂಲಕವೂ ಬಳಸಿಕೊಳ್ಳಬಹುದು.