ಇಲನ್ ಮಸ್ಕ್ ಅವರ ಸ್ಟಾರ್ಲಿಂಕ್ ಶೀಘ್ರವೇ ಭಾರತಕ್ಕೆ ಪ್ರವೇಶಿಸಲಿದೆ. ವೇಗದ ಇಂಟರ್ನೆಟ್ ಸೇವೆಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಲುಪಿಸುವ ಗುರಿಯೊಂದಿಗೆ, ಸ್ಟಾರ್ಲಿಂಕ್ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನು ತರಲು ಸಿದ್ಧವಾಗಿದೆ. ಜಿಯೋ ಮತ್ತು ಏರ್‌ಟೆಲ್‌ಗೆ ಹೊಸ ಸ್ಪರ್ಧೆ ಎದುರಾಗಲಿದೆ. ಗ್ರಾಹಕರಿಗೆ ಬಿಗಿಬಡಿತದ ದರದಲ್ಲಿ ಉತ್ತಮ ಗುಣಮಟ್ಟದ ಸೇವೆಗಳು ಸಿಕ್ಕುವ ನಿರೀಕ್ಷೆಯಿದೆ.
ಸ್ಟಾರ್‌ಲಿಂಕ್ ಎನ್ನುವುದು ಸ್ಪೇಸ್‌ಎಕ್ಸ್ ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ವಿಶ್ವದಾದ್ಯಂತ ಹೈ-ಸ್ಪೀಡ್, ಕಡಿಮೆ ಲೇಟೆನ್ಸಿಯ ಇಂಟರ್ನೆಟ್ ಸೇವೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಭಾರತ, 140 ಕೋಟಿ ಜನಸಂಖ್ಯೆಯೊಂದಿಗೆ, ಡಿಜಿಟಲ್ ಸಂಪರ್ಕದಲ್ಲಿ ಪ್ರಪಂಚದ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಆದರೆ ಇನ್ನೂ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆಯು ಪ್ರಮುಖ ಸವಾಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸ್ಟಾರ್‌ಲಿಂಕ್, ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆಯ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆ, ಭಾರತದಲ್ಲಿ ತನ್ನ ಪ್ರವೇಶವನ್ನು ಘೋಷಿಸಿದೆ
ಸ್ಟಾರ್‌ಲಿಂಕ್ ಒಂದು ಆದುನಿಕ ಲಿಯೋ ಸ್ಯಾಟಲೈಟ್ (Low Earth Orbit Satellite) ತಂತ್ರಜ್ಞಾನ ಆಧಾರಿತ ಸೇವೆಯಾಗಿದೆ. 7000 ಕ್ಕೂ ಹೆಚ್ಚು ಚಿಕ್ಕ ಉಪಗ್ರಹಗಳನ್ನು ಬಳಸಿಕೊಂಡು, ಇದು ಪ್ರಪಂಚದ ಯಾವುದೇ ಮೂಲೆಯಲ್ಲೂ ವೇಗದ, ಭರಾಟೆಯ ಇಂಟರ್ನೆಟ್ ಒದಗಿಸುತ್ತದೆ. ಇದು ಇಂಟರ್ನೆಟ್ ಪೂರೈಕೆಯಲ್ಲಿ ಭೌಗೋಳಿಕ ಅಡ್ಡಿ-ಅಡಚಣೆಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.
ಸ್ಟಾರ್‌ಲಿಂಕ್‌ನ ವಿಶೇಷತೆಗಳು
ಸ್ಟಾರ್‌ಲಿಂಕ್ ದೇಶದ ಮೂಲೆಮೂಲೆಗೂ ಹೈ ಸ್ಪೀಡ್ ಇಂಟರ್ನೆಟ್ ಒದಗಿಸಲಿದೆ .
ಅತ್ಯುತ್ತಮ ವೇಗ: 50 Mbps – 200 Mbps ಗರಿಷ್ಠ ವೇಗ, ಹಾಲ್-ಟೈಮ್ ಲ್ಯಾಟೆನ್ಸಿ ಕಡಿಮೆ, ದೀರ್ಘಾವಧಿ ಗೇಮಿಂಗ್, ಸ್ಟ್ರೀಮಿಂಗ್, ಮತ್ತು ವೃತ್ತಿಪರ ಕಾರ್ಯಗಳಿಗೆ ನಿಖರ.
ಗ್ರಾಮೀಣ ಪ್ರದೇಶಳಲ್ಲಿ ಶಿಕ್ಷಣ ಮತ್ತು ಆರೋಗ್ಯ, ದೈನಂದಿನ ವ್ಯಾಪಾರ, ಉದ್ಯೋಗ ಅವಕಾಶಗಳಿಗೆ ಇದು ದಾರಿ ಮಾಡಿಕೊಡಬಹುದು.
4G/5G ಡೇಟಾದಂತೆ ಡ್ರಾಪ್ ಅಥವಾ ಸಿಗ್ನಲ್ ಸಮಸ್ಯೆ ಇಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಪೀಡ್ ಕಡಿಮೆ ಅಥವಾ ಸಂಪರ್ಕವೇ ಇಲ್ಲದ ಪ್ರದೇಶಗಳಲ್ಲಿ ಸ್ಟಾರ್‌ಲಿಂಕ್ ಕಾರ್ಯಕ್ಷಮವಾಗಿರುತ್ತದೆ.
ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಪ್ರಮುಖ ಕಂಪನಿಗಳ ಮಾರುಕಟ್ಟೆ ಪಾಲು:
- ರಿಲಯನ್ಸ್ ಜಿಯೋ: ಭಾರತದ ದೊಡ್ಡ ದೂರಸಂಪರ್ಕ ಕಂಪನಿಯಾಗಿದ್ದು, ಸುಮಾರು 35% ರಿಂದ40% ಮಾರುಕಟ್ಟೆ ಪಾಲನ್ನು ಹೊಂದಿದೆ. 2016 ರಲ್ಲಿ ಪ್ರಾರಂಭವಾದ ನಂತರ, ಜಿಯೋ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿತು, ಕಡಿಮೆ ದರದ ಡೇಟಾ ಯೋಜನೆಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯನ್ನು ಬದಲಾಯಿಸಿತು.
- ಭಾರ್ತಿ ಏರ್ಟೆಲ್: ದ್ವಿತೀಯ ಅತಿ ದೊಡ್ಡ ಕಂಪನಿಯಾಗಿದ್ದು, ಸುಮಾರು 27% ರಿಂದ 30% ಮಾರುಕಟ್ಟೆ ಪಾಲನ್ನು ಹೊಂದಿದೆ. ಏರ್ಟೆಲ್ ದೀರ್ಘಕಾಲದಿಂದ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಪ್ರಮುಖ ಆಟಗಾರನಾಗಿದ್ದು, ವ್ಯಾಪಕವಾದ ನೆಟ್ವರ್ಕ್ ಮತ್ತು ವಿವಿಧ ಸೇವೆಗಳನ್ನು ನೀಡುತ್ತದೆ.
- ವೋಡಾಫೋನ್ ಐಡಿಯಾ: ಮೂರನೇ ಅತಿ ದೊಡ್ಡ ಕಂಪನಿಯಾಗಿದ್ದು, ಸುಮಾರು 12% ರಿಂದ15% ಮಾರುಕಟ್ಟೆ ಪಾಲನ್ನು ಹೊಂದಿದೆ. ವೋಡಾಫೋನ್ ಮತ್ತು ಐಡಿಯಾ ಸಂಯೋಜನೆಯ ನಂತರ, ಕಂಪನಿಯು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.
- ಬಿಎಸ್‌ಎನ್‌ಎಲ್ 7% ರಿಂದ 9% ಮಾರುಕಟ್ಟೆ ಪಾಲನ್ನು ಹೊಂದಿದೆ
- MTNL 0.9% ಮಾರುಕಟ್ಟೆ ಪಾಲನ್ನು ಹೊಂದಿದೆ.