ಭಾರತೀಯ ರೂಪಾಯಿ ಮೌಲ್ಯ ಡಾಲರ್‌ಗೆ ಎದುರಾಗಿ ಇತಿಹಾಸದಲ್ಲೇ ತೀರಾ ಕಡಿಮೆ ಮಟ್ಟಕ್ಕೆ ಕುಸಿಯುವುದರೊಂದಿಗೆ, ಚಿನ್ನದ ಬೆಲೆಯು ಮತ್ತೊಮ್ಮೆ ದಾಖಲೆಯ ಶಿಖರವನ್ನು ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $2,750 ದಾಟಿದ್ದು, ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,600 ತಲುಪಿದೆ.
ಹೂಡಿಕೆದಾರರು ರೂಪಾಯಿ ಸೇರಿದಂತೆ ಇತರ ಆರ್ಥಿಕತೆಯ ನಾಣ್ಯಗಳ ಮೌಲ್ಯ ಕುಸಿತದಿಂದ ಚಿನ್ನದತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆ, ಅಮೇರಿಕನ್ ಡಾಲರ್‌ನ ಬಲಿಷ್ಠ ಸ್ಥಿತಿ, ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಅನೇಕ ದೇಶಗಳಲ್ಲಿ ಆರ್ಥಿಕ ಮಂದಗತಿಯ ಪರಿಣಾಮ ಈ ಬೆಳವಣಿಗೆಗೆ ಕಾರಣವಾಗಿದೆ.
ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್‌ಗೆ ₹86.58 ದಾಟಿ ಹೊಸ ದಾಖಲೆ ಮಟ್ಟಕ್ಕೆ ತಲುಪಿದೆ. ಆರ್ಥಿಕ ತಜ್ಞರ ಪ್ರಕಾರ ರೂಪಾಯಿ ಮೌಲ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದ್ದು ಡಾಲರು ಎದುರು 90 ರೂಪಾಯಿ ವರೆಗೆ ಆಗುವ ಸಾಧ್ಯತೆ ಇದೆ.