ಯುನೈಟೆಡ್ ಕಿಂಗ್‌ಡಮ್‌ನ ಆಸ್ಪತ್ರೆಗಳಲ್ಲಿ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ದಾಖಲಿಸುತ್ತಿವೆ. ವಿಶೇಷವಾಗಿ ಇನ್ಫ್ಲುಯೆಂಜಾ (Influenza) ಪ್ರಕರಣಗಳ ಹೆಚ್ಚಳ, ಆರೋಗ್ಯ ಇಲಾಖೆಗೆ ತೀವ್ರ ಚಿಂತೆ ಉಂಟುಮಾಡಿದೆ. ಜ್ವರ ಪ್ರಕರಣಗಳು ಈಗಾಗಲೇ ಚಳಿಗಾಲದ ಮಧ್ಯಭಾಗದಲ್ಲಿ ತಲುಪಬೇಕಿದ್ದ ಮಟ್ಟವನ್ನು ಮೀರಿದೆ ಎಂದು ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ (PHE) ತಿಳಿಸಿದೆ. ಜ್ವರ , ಕೋವಿಡ್ ಪ್ರಕರಣಗಳ ಏರಿಕೆಯಿಂದಾಗಿ ಆಸ್ಪತ್ರೆಗಳು ಹೆಚ್ಚಿನ ಆಸ್ಪತ್ರೆಗಳು ರೋಗಿಗಳ ಸಂಖ್ಯೆಯನ್ನು ನಿರ್ವಹಿಸಲು ಪರದಾಡುತ್ತಿವೆ.
ಇನ್‌ಫ್ಲುಯೆಂಜಾ ( Influenza )ಮತ್ತು ಕೋವಿಡ್-19, ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ಇತರ ವೈರಲ್ ಸೋಂಕುಗಳು ಒಂದೇ ಸಮಯದಲ್ಲಿ ಹರಡುತ್ತಿರುವುದರಿಂದ ಆಸ್ಪತ್ರೆಗಳ ತುರ್ತು ವಿಭಾಗಗಳು ತುಂಬಿ ಹೋಗುತ್ತಿವೆ. ಯುಕೆನ ಆರೋಗ್ಯ ಸೇವಾ ವ್ಯವಸ್ಥೆಯ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಜ್ವರಕ್ಕೆ ಸಂಬಂಧಿಸಿದ ಆಸ್ಪತ್ರೆ ಪ್ರವೇಶಗಳ ಸಂಖ್ಯೆ 30% ಹೆಚ್ಚು ಏರಿಕೆಯಾಗಿದೆ.
ಜ್ವರವು ಮುಖ್ಯವಾಗಿ ವಯೋವೃದ್ಧರು, ಬಾಲಕರು, ಮತ್ತು ಹೃದಯಸಂಬಂಧಿ ಸಮಸ್ಯೆ ಅಥವಾ ಪ್ರತಿ-ರಕ್ಷಣಾ ಶಕ್ತಿ ಕಡಿಮೆ ಇರುವ ವ್ಯಕ್ತಿಗಳನ್ನು ಹೆಚ್ಚು ಭಾದಿಸುತ್ತಿದೆ. ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ತಕ್ಷಣವೇ ಜ್ವರದ ಲಸಿಕೆ ಪಡೆಯುವಂತೆ ಸಲಹೆ ನೀಡಿದೆ ಜೊತೆಗೆ, ಬಿಸಿ ನೀರಿನ ಸೇವನೆ, ವಿಶ್ರಾಂತಿ, ಮತ್ತು ವೈದ್ಯಕೀಯ ಸಲಹೆಯನ್ನು ಅನುಸರಿಸುವಂತೆ ಸಲಹೆ ನೀಡಿದೆ.