ಲಂಡನ್: ಇಂಗ್ಲೆಂಡಿನಲ್ಲಿ, ವಿಶೇಷವಾಗಿ ಲಂಡನ್‌ನಲ್ಲಿ ಹೆಚ್ಚಿನ ರಿಯಲ್ ಎಸ್ಟೇಟ್ ಈಗ ಭಾರತೀಯರ ಕೈಯಲ್ಲಿದೆ. ಲಂಡನ್‌ಆಧಾರಿತ ಪ್ರಾಪರ್ಟಿ ಡೆವಲಪರ್ ಬಾರೆಟ್ ಇತ್ತೀಚಿನ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ತಲೆಮಾರುಗಳಿಂದ ಯುಕೆಯಲ್ಲಿ ನೆಲೆಸಿರುವ ಭಾರತೀಯ ವಂಶಜರು, ವಿದೇಶಿ ಹೂಡಿಕೆದಾರರು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಉದ್ದೇಶದಿಂದ ಇಂಗ್ಲೆಂಡ್‌ಗೆ ವಲಸೆ ಬಂದಿರುವ ಭಾರತೀಯ ಕುಟುಂಬಗಳು ಲಂಡನ್‌ನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. ಈ ಮಾಹಿತಿಯನ್ನು ಬಾರೆಟ್ ಲಂಡನ್ ಕಳೆದ ವಾರ ಪ್ರಕಟಿಸಿದೆ.ಇದು ಭಾರತೀಯರು ಮತ್ತು ವಿದೇಶಿಗರ ನಡುವೆಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇಂದಿನ ದಿನಗಳಲ್ಲಿ ಲಂಡನ್ ನಗರದಲ್ಲಿ ಭಾರತೀಯರು ಅತೀ ದೊಡ್ಡ ಪ್ರಾಪರ್ಟಿ ಮಾಲೀಕರು. ಎರಡನೇ ಸ್ಥಾನದಲ್ಲಿ ಇಂಗ್ಲೀಷ್ ಜನರಿದ್ದು, ಮೂರನೇ ಸ್ಥಾನದಲ್ಲಿ ಪಾಕಿಸ್ತಾನಿಗಳು ಇದ್ದಾರೆ. ಭಾರತೀಯರು ಲಂಡನ್‌ನಲ್ಲಿ ಮನೆಗಳನ್ನು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ₹3 ಕೋಟಿ₹4.5 ಕೋಟಿಯವರೆಗೆ ಹೂಡಿಕೆ ಮಾಡುತ್ತಿರುವುದಾಗಿ ವರದಿ ತಿಳಿಸಿದೆ. ಒಮ್ಮೆ ವಿಶ್ವದ ಅರ್ಧದಷ್ಟು ಆಸ್ತಿಯನ್ನು ತಮ್ಮ ಕಾಯಿಲಲ್ಲಿಟ್ಟುಕೊಂಡಿದ್ದ ಇಂಗ್ಲಿಷ್ ಜನರು ಈಗ ಲಂಡನ್‌ನ ಅರ್ಧಕ್ಕಿಂತ ಕಡಿಮೆ ಆಸ್ತಿಯ ಜೊತೆ ಉಳಿದಿದ್ದಾರೆ,” ಎಂದು ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ ಮಾತ್ರ 1.5 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಬ್ರಿಟಿಷರು 200 ವರ್ಷಗಳ ಕಾಲ ಭಾರತವನ್ನು ಅಕ್ರಮವಾಗಿ ತಮ್ಮದಾಗಿಸಿಕೊಂಡಿದ್ದರು. ಈಗ ಭಾರತೀಯರು ಕಾನೂನುಬದ್ಧವಾಗಿ ಬ್ರಿಟನ್ ಅನ್ನು ತಮ್ಮದಾಗಿಸುತ್ತಿದ್ದಾರೆ, ಅದು ಸಹ ಪೂರ್ತಿ ಸ್ಪರ್ಧಾತ್ಮಕ ವಾತಾವರಣದಲ್ಲಿ,” ಎಂದು ಇನ್ನೊಬ್ಬ ಭಾರತೀಯರು ಕಾಮೆಂಟ್ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಭಾರತೀಯರ ಹೂಡಿಕೆಗಳು ಕೇವಲ ಆಸ್ತಿ ಮಾರುಕಟ್ಟೆಯಲ್ಲದೆ, ಸ್ಥಳೀಯ ಆರ್ಥಿಕತೆಯ ಮೇಲೂ ಪ್ರಭಾವ ಬೀರಿವೆ. ಉದ್ಯೋಗ ಸೃಷ್ಟಿ, ಸ್ಥಳೀಯ ಸೇವಾ ಕ್ಷೇತ್ರಗಳಿಗೆ ಬೆಂಬಲ, ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಅವರು ನೀಡುತ್ತಿರುವ ಕೊಡುಗೆಗಳು ಬ್ರಿಟನ್‌ನ ಆರ್ಥಿಕತೆಗೆ ಬಲ ನೀಡುತ್ತವೆ.