ಯುನೈಟೆಡ್ ಕಿಂಗ್‌ಡಮ್ (ಯುಕೇ) ಸರ್ಕಾರ ಜನವರಿ 2025ರಿಂದ ವೀಸಾ ಪ್ರಕ್ರಿಯೆಗೆ ಹೊಸ ಹಣಕಾಸು ನಿಯಮಗಳನ್ನು ಜಾರಿಗೆ ತರುತ್ತಿದೆ. ಹೊಸ ನಿಯಮಗಳ ಪ್ರಕಾರ, ಲಂಡನ್‌ನಲ್ಲಿ ವಾಸಿಸಲು ವಿದ್ಯಾರ್ಥಿಗಳು ಪ್ರತಿ ತಿಂಗಳು £1,483 (£13,347 ವರ್ಷಕ್ಕೆ) ಮತ್ತು ಲಂಡನ್ ಹೊರಗಡೆ £1,136 (£10,224 ವರ್ಷಕ್ಕೆ) ಈ ಮೊತ್ತವನ್ನು ತೋರಿಸಬೇಕು. ಈ ಮೊತ್ತವನ್ನು ಅರ್ಜಿಯ 28 ದಿನಗಳ ಮುಂಚಿನಿಂದ ಬ್ಯಾಂಕ್ ಖಾತೆಯಲ್ಲಿ ಇರಿಸಬೇಕು. ಸ್ಕಿಲ್ಡ್ ವರ್ಕರ್ ವೀಸಾ ಅರ್ಜಿದಾರರು ಕನಿಷ್ಠ £38,700 ವಾರ್ಷಿಕ ಆದಾಯ ತೋರಿಸಬೇಕು ಮತ್ತು ಅಧಿಕೃತ UK ಉದ್ಯೋಗದಾತರಿಂದ ಸ್ಪಾನ್ಸರ್ ಹೊಂದಿರಬೇಕು. ವೀಸಾ ಶುಲ್ಕಗಳಲ್ಲಿ ಲಘು ಪ್ರಮಾಣದ ಹೆಚ್ಚಳವಾಗಲಿದ್ದು
ಆರೋಗ್ಯ, ಸೇನೆ, ಮತ್ತು ವಿಶೇಷ ವಲಯದ ಕೆಲಸಗಾರರಿಗೆ ವಿನಾಯಿತಿ ದೊರೆಯುತ್ತದೆ. ಸತತ 28 ದಿನಗಳವರೆಗೆ ಅರ್ಜಿದಾರರ ಖಾತೆಯಲ್ಲಿ ಹಣ ಉಳಿಯಬೇಕು ಎಂಬ ನಿಬಂಧನೆಗಳು ಅಗತ್ಯವಾಗಿ ಪಾಲಿಸಬೇಕಾಗಿದ್ದು ಈ ಹೊಸ ನಿಯಮಗಳು ಜನವರಿ , 2025 ರಿಂದ ಜಾರಿಗೆ ಬಂದಿವೆ. ಅಧಿಕೃತ ಮಾಹಿತಿಗಾಗಿ ಯುಕೇ ಸರ್ಕಾರದ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.