ICYM ಕಾಸರಗೋಡು ವಲಯ ಇಂಟರ್-ಪ್ಯಾರಿಶ್ ಕ್ರಿಕೆಟ್ ಟೂರ್ನಮೆಂಟ್ ಕೊಲ್ಲಂಗಾನ St.Thomas ಚರ್ಚು ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಚಾಂಪಿಯನ್ ಟ್ರೋಫಿಯನ್ನು ಗೆದ್ದ ತಂಡಕ್ಕೆ ಪ್ರಶಸ್ತಿ ಪ್ರದಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಘಟಕದ ನಿರ್ದೇಶಕರು ಚರ್ಚ್ ಧರ್ಮಗುರುಗಳಾದ ಫಾ. ಲೂಯಿಸ್ ಕುಟಿನ್ಹಾ, ಕಾಸರ್ಗೋಡು ವಲಯ ಐಸಿವೈಎಂ ನಿರ್ದೇಶಕ ಫಾ. ವಿಶಾಲ್ ಮೊನಿಸ್, ಕಾಸರ್ಗೋಡು ವಲಯ ಐಸಿವೈಎಂ ಅನಿಮೇಟರ್ ಸಿಸ್ಟರ್ ಸೆವರಿನ್, ಕಾಸರ್ಗೋಡು ವಲಯ ಐಸಿವೈಎಂ ಅಧ್ಯಕ್ಷ ಮೆಲ್ವಿನ್ ಕಯ್ಯಾರ್, ಕಾಸರ್ಗೋಡು ವಲಯ ಐಸಿವೈಎಂ ಕಾರ್ಯದರ್ಶಿ ನೇಮಾ ಡಿಸಿಲ್ವಾ, ಮಂಗಳೂರು ಧರ್ಮಕ್ಷೇತ್ರದ ಕಾಸರ್ಗೋಡ್ ವಲಯ ಪ್ರತಿನಿಧಿ ನಿಹಾಲ್ , ಕಾಸರ್ಗೋಡು ಚರ್ಚ್ ಉಪಾಧ್ಯಕ್ಷ ರಿಚರ್ಡ್ ಕ್ರಾಸ್ತಾ ಮತ್ತು ಕಾಸರ್ಗೋಡು ವಲಯ ಐಸಿವೈಎಂ ಕಾರ್ಯಕಾರಿ ಸದಸ್ಯರು ಉಪಸ್ಥಿತರಿದ್ದರು.
ಕೊಲ್ಲಂಗನಾ ತಂಡದ ನಾಯಕ ಶೈಲೆಂದ್ರ ಮತ್ತು ತಂಡದ ಸದಸ್ಯರು ಟ್ರೋಫಿಯನ್ನು ಪಡೆದರು. ಕೊಲ್ಲಂಗನಾದ ಕೆನೆತ್ ಡಿ’ಸೋಜಾ ಅತ್ಯುತ್ತಮ ಬೌಲರ್ ಆಗಿ , ರಾಕೇಶ್ ಡಿ’ಸೋಜಾ ಫೈನಲ್ಸ್‌ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ವಿಜೇತರಾದರು. ಮೆಲ್ವಿನ್ ಕ್ರಾಸ್ತಾ ಸರಣಿಯ ಅತ್ಯುತ್ತಮ ಆಟಗಾರ (ಮ್ಯಾನ್ ಆಫ್ ದ ಸೀರೀಸ್) ಎಂದು ಗೌರವಿಸಲ್ಪಟ್ಟರು