ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 32,438 ಗ್ರೂಪ್ D ಹುದ್ದೆಗಳ ಭರ್ತಿಗೆ ಬಹುನಿರೀಕ್ಷಿತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ. ಅರ್ಜಿ ಪ್ರಕ್ರಿಯೆ ಜನವರಿ 29, 2025 ರಿಂದ ಫೆಬ್ರವರಿ 22, 2025 ರವರೆಗೆ ನಡೆಯಲಿದೆ.

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) 32,438 ಗ್ರೂಪ್ ಡಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 29, 2025 ರಿಂದ ಫೆಬ್ರವರಿ 22, 2025 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರಗಳು:
ಟ್ರ್ಯಾಕ್ ಮೆಂಟೈನರ್ ಗ್ರೇಡ್ IV (ಎಂಜಿನಿಯರಿಂಗ್): 13,187 ಹುದ್ದೆಗಳು
ಪಾಯಿಂಟ್ಸ್‌ಮನ್-ಬಿ (ಟ್ರಾಫಿಕ್): 5,058 ಹುದ್ದೆಗಳು
ಅಸಿಸ್ಟಂಟ್ (ಸಿ&ಡಬ್ಲ್ಯೂ) (ಮೆಕ್ಯಾನಿಕಲ್): 2,587 ಹುದ್ದೆಗಳು
ಅಸಿಸ್ಟಂಟ್ (ಎಸ್&ಟಿ): 2,012 ಹುದ್ದೆಗಳು
ಅಸಿಸ್ಟಂಟ್ (ವರ್ಕ್‌ಶಾಪ್) (ಮೆಕ್ಯಾನಿಕಲ್): 3,077 ಹುದ್ದೆಗಳು
ಅಸಿಸ್ಟಂಟ್ ಲೊಕೋ ಶೆಡ್ (ಇಲೆಕ್ಟ್ರಿಕಲ್): 950 ಹುದ್ದೆಗಳು
ಅಸಿಸ್ಟಂಟ್ ಟಿಎಲ್ & ಎಸಿ (ಇಲೆಕ್ಟ್ರಿಕಲ್): 1,041 ಹುದ್ದೆಗಳು
ಅಸಿಸ್ಟಂಟ್ (ಟ್ರ್ಯಾಕ್ ಮೆಷಿನ್) (ಎಂಜಿನಿಯರಿಂಗ್): 799 ಹುದ್ದೆಗಳು
ಅಸಿಸ್ಟಂಟ್ ಆಪರೇಷನ್ಸ್ (ಇಲೆಕ್ಟ್ರಿಕಲ್): 744 ಹುದ್ದೆಗಳು
ಅಸಿಸ್ಟಂಟ್ ಟಿಎಲ್ & ಎಸಿ (ವರ್ಕ್‌ಶಾಪ್) (ಇಲೆಕ್ಟ್ರಿಕಲ್): 624 ಹುದ್ದೆಗಳು
ಅಸಿಸ್ಟಂಟ್ (ಬ್ರಿಡ್ಜ್) (ಎಂಜಿನಿಯರಿಂಗ್): 301 ಹುದ್ದೆಗಳು
ಅರ್ಹತಾ ಮಾನದಂಡ:
ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ. ವಯೋಸೀಮೆಯಲ್ಲಿ ಶಿಥಿಲತೆ ಸರ್ಕಾರದ ನಿಯಮಗಳ ಪ್ರಕಾರ ಅನ್ವಯಿಸುತ್ತದೆ.
ಆನ್‌ಲೈನ್ ಅರ್ಜಿ ಪ್ರಕ್ರಿಯೆ:
ಅಭ್ಯರ್ಥಿಗಳು ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪಾವತಿಸಬಹುದು.
ಆಯ್ಕೆ ಪ್ರಕ್ರಿಯೆ:
ಹಂತ 1: ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ 1)
ಹಂತ 2: ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಇಟಿ)
ಹಂತ 3: ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ಗಳನ್ನು ಭೇಟಿ ಮಾಡಬಹುದು.
