ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದುಬೈ ಸರ್ಕಾರವು 10,000 ಕ್ರಿಯೇಟರ್‌ಗಳಿಗೆ ವಿಶೇಷ ವೀಸಾ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಘೋಷಿಸಿದೆ. ಕ್ರಿಯೇಟರ್‌ಸ್ HQ ಹೆಸರಿನ ಈ ಪ್ರಮುಖ ಕಾರ್ಯಕ್ರಮವನ್ನು ಜನವರಿ 13 ರಂದು ಎಮಿರೇಟ್ಸ್ ಟವರ್‌ಗಳಲ್ಲಿ ಲಾಂಚ್ ಮಾಡಲಾಯಿತು.ಈ ಯೋಜನೆಯಡಿ ಇನ್‌ಫ್ಲುಯೆನ್ಸರ್‌ಗಳು, ಪಾಡ್‌ಕಾಸ್ಟರ್‌ಗಳು ಮತ್ತು ಡಿಜಿಟಲ್ ಕಲಾವಿದರು 10 ವರ್ಷಗಳ ಗೋಲ್ಡನ್ ವೀಸಾ ಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಈ ಯೋಜನೆಯ ಉದ್ದೇಶ ದುಬೈಯನ್ನು ಜಾಗತಿಕ ಡಿಜಿಟಲ್ ಕಂಟೆಂಟ್ ಸೃಜನಶೀಲರ ಕೇಂದ್ರವಾಗಿ ರೂಪಿಸುವುದು ಮತ್ತು ವಿಶ್ವದ ಪ್ರಮುಖ ಪ್ರತಿಭೆಗಳನ್ನು ಆಕರ್ಷಿಸುವುದು. ಸೃಜನಶೀಲತೆಯ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲು ಈ ಯೋಜನೆ ಪ್ರಮುಖ ಪಾತ್ರವಹಿಸಲಿದೆ.

ಡಿಜಿಟಲ್ ಆರ್ಥಿಕತೆಯ ಬೆಳವಣಿಗೆ
2023ರಲ್ಲಿ USD 250 ಬಿಲಿಯನ್ ಆದಾಯವನ್ನು ಹೊಂದಿದ್ದ ಡಿಜಿಟಲ್ ಕಂಟೆಂಟ್ ಆರ್ಥಿಕತೆ 2027ರ ವೇಳೆಗೆ USD 480 ಬಿಲಿಯನ್ ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಯುಎಇನ ಈ ಯೋಜನೆ ಸಮಯೋಚಿತವಾಗಿದೆ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಯಾರು ಅರ್ಜಿ ಹಾಕಬಹುದು?
ಈ ಯೋಜನೆಗೆ ಈ ಕೆಳಗಿನ ವೃತ್ತಿಪರರು ಅರ್ಜಿ ಹಾಕಬಹುದು:
- ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ಗಳು, ಯೂಟ್ಯೂಬರ್ಸ್, ಎಡಿಟರ್
- ಇನ್ಸ್ಟಾಗ್ರಾಮ್ ಎಡಿಟರ್
- ಪಾಡ್‌ಕಾಸ್ಟರ್‌ಗಳು
- ವಿಡಿಯೋ ಸಂಪಾದಕರರು
- ದೃಶ್ಯಕಲಾವಿದರು
- ಜಾಹೀರಾತು ವೃತ್ತಿಪರರು
- ಆನಿಮೇಶನ್ ಸ್ಟುಡಿಯೋ ಎಡಿಟರ್
ಗೋಲ್ಡನ್ ವೀಸಾ ಯೋಜನೆ
2019ರಲ್ಲಿ ಯುಎಇ ಪ್ರಾರಂಭಿಸಿದ ಗೋಲ್ಡನ್ ವೀಸಾ, ವಿದೇಶೀಯರಿಗೆ ಸ್ಥಳೀಯ ಪ್ರಾಯೋಜಕರ ಅವಶ್ಯಕತೆ ಇಲ್ಲದೆ ದೇಶದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ವ್ಯವಹಾರ ನಡೆಸಲು ಅನುಮತಿಸುತ್ತದೆ. ಈ ವೀಸಾ 5 ಅಥವಾ 10 ವರ್ಷಗಳ ಅವಧಿಗೆ ನೀಡಲಾಗುತ್ತದೆ ಮತ್ತು ನವೀಕರಿಸಬಹುದಾಗಿದೆ.

