ಲಂಡನ್, ಜನವರಿ 17, ಬ್ರಿಟನ್ ಸರ್ಕಾರವು ಪ್ರಯಾಣಿಕರಿಗೆ ಭರ್ಜರಿ ರಿಯಾಯಿತಿ ನೀಡುವ ರೈಲ್ ಸೇಲ್ ಅನ್ನು ಪ್ರಾರಂಭಿಸಿದೆ. ಈ ಆಫರ್ ಅಡಿಯಲ್ಲಿ ಜನವರಿ 17 ರಿಂದ ಮಾರ್ಚ್ 31, 2025 ರವರೆಗೆ ಪ್ರಯಾಣಿಸುವವರಿಗೆ 50% ವರೆಗೆ ರಿಯಾಯಿತಿ ದೊರೆಯಲಿದೆ. ಜನವರಿ 14 ರಿಂದ 20 ರವರೆಗೆ ಮಾರಾಟವಾಗುವ ಆಯ್ದ ಅಡ್ವಾನ್ಸ್ ಮತ್ತು ಆಫ್-ಪೀಕ್ ಟಿಕೆಟ್‌ಗಳು 50% ವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ.
Journey | Sale price | Full price |
---|---|---|
St Pancras to Whitstable | £7.20 | £11.30 |
Ashford to Ramsgate | £2.60 | £5.20 |
Leeds to Manchester Airport | £5.90 | £11.90 |
Newcastle to Carlisle | £6.00 | £12.00 |
Liverpool to London Euston | £7.00 | £14.00 |
Nottingham to Manchester | £9.20 | £18.50 |
Leeds to Sheffield | £3.60 | £7.20 |
London to Edinburgh | £26.15 | £62.50 |
Aberdeen to Edinburgh* | £14.50 | £29.00 |
Glasgow to Inverness* | £14.10 | £28.10 |
Preston to Edinburgh | £8.40 | £16.80 |
London to Newcastle | £23.60 | £52.10 |
ಈ ಬಾರಿಯ ರೈಲ್ ಸೇಲ್‌ನಲ್ಲಿ ಬ್ರಿಟನ್‌ನಾದ್ಯಂತ ಸಾವಿರಾರು ಜನಪ್ರಿಯ ಮಾರ್ಗಗಳಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್‌ಗಳು ಲಭ್ಯವಿರುತ್ತವೆ. ಲಿವರ್‌ಪೂಲ್‌ನಿಂದ ಲಂಡನ್‌ಗೆ ಕೇವಲ £7, ಪ್ರೆಸ್ಟನ್‌ನಿಂದ ಎಡಿನ್‌ಬರ್ಗ್‌ಗೆ £8.40 ಮತ್ತು ನಾಟಿಂಗ್‌ಹ್ಯಾಮ್‌ನಿಂದ ಮ್ಯಾಂಚೆಸ್ಟರ್‌ಗೆ £10 ರಿಂದ ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಈ ಆಫರ್‌ಗಳು ಅಲ್ಪಾವಧಿಯವಾಗಿದ್ದು, ಸೀಮಿತ ಸಂಖ್ಯೆಯ ಟಿಕೆಟ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಆದ್ದರಿಂದ, ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ತಕ್ಷಣವೇ ಕಾಯ್ದಿರಿಸಲು ಸೂಚಿಸಲಾಗಿದೆ.
ಈ ವರ್ಷ ಯುಕೆಯ ರೈಲುಗಳಿಗೆ 200 ವರ್ಷ ಪೂರ್ತಿಯಾಗಿದ್ದು, ಅದರ ಭಾಗವಾಗಿ ಹಲವು ಕಾರ್ಯಕ್ರಮಗಳು ನಡೆಯಲಿವೆ.