Author: admin
ಭಾರತದ ಭೂಭಾಗದಲ್ಲಿ ಚೀನಾ ಹೊಸ ಜಿಲ್ಲೆಗಳ ಸ್ಥಾಪನೆ. ಚೀನಾ, ಭಾರತದ ಅಕ್ಸೈಚಿನ್ ಪ್ರದೇಶದ ಜಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಹೊಸ ಜಿಲ್ಲೆಗಳ ಸ್ಥಾಪನೆ ಘೋಷಿಸಿದೆ. ಈ ಪ್ರದೇಶವು ಭಾರತದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿದೆ. ಚೀನಾ ತನ್ನ ನೂತನ ಆಡಳಿತ ಭೂ ನಕ್ಷೆಯಲ್ಲಿ , ಅಕ್ಸೈಚಿನ್ ಪ್ರದೇಶವನ್ನು ಚೀನಾದ ಜಿನ್‌ಜಿಯಾಂಗ್ ಪ್ರಾಂತ್ಯದ ಭಾಗವಾಗಿ ಸೇರಿಸಿದೆ ಗಡಿ ಪ್ರದೇಶದಲ್ಲಿ ಚೀನಾ ತೆಗೆದುಕೊಳ್ಳುತ್ತಿರುವ ಈ ಕ್ರಮವು 2020ರಲ್ಲಿ ಗಾಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆ ಮತ್ತು ನಂತರದ ಗಡಿ ಉದ್ವಿಗ್ನತೆಗಳ ಹಿನ್ನಲೆಯಲ್ಲಿ, ಭಾರತದ ಜೊತೆಗಿನ ಸಂಬಂಧವನ್ನು ಮತ್ತಷ್ಟು ಹದಗೆಸುವ ಸಾಧ್ಯತೆಯನ್ನು ತೋರಿಸುತ್ತದೆ. ಚೀನಾ ತನ್ನ ಈ ಕಾರ್ಯವನ್ನು ಆಡಳಿತ ಸುಧಾರಣೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರೂ, ಇದು ಭಾರತದ ಪ್ರಾದೇಶಿಕ ಹಕ್ಕುಗಳನ್ನು ಕಟ್ಟುನಿಟ್ಟಾಗಿ ಉಲ್ಲಂಘಿಸುತ್ತದೆ. ನವದೆಹಲಿಯು ಚೀನಾ ತನ್ನ ಪ್ರಾದೇಶಿಕ ನಿರ್ಧಾರಗಳನ್ನು ತಕ್ಷಣವೇ ಬಿಟ್ಟು, ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸಲು ಚರ್ಚೆಗೆ ಮುಂದಾಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಗಡಿ ಪ್ರದೇಶದಲ್ಲಿ ಚೀನಾ ತೆಗೆದುಕೊಳ್ಳುತ್ತಿರುವ ಈ ಕ್ರಮವು 2020ರಲ್ಲಿ ಗಾಲ್ವಾನ್ ಕಣಿವೆಯ ಹಿಂಸಾತ್ಮಕ ಘರ್ಷಣೆ ಮತ್ತು ನಂತರದ ಗಡಿ ಉದ್ವಿಗ್ನತೆಗಳ ಹಿನ್ನಲೆಯಲ್ಲಿ,…
ಬೀಜಿಂಗ್: ಕೋವಿಡ್ 19 ನೆನಪು ಇನ್ನೂ ಮಾಸುವ ಮುನ್ನವೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಹಬ್ಬುವ ಸಂಭವದ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್.ಎಂ.ಪಿ.ವಿ) ಎಂಬ ಹೊಸ ವೈರಸ್ ಚೀನಾದ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು, ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಮಾಹಿತಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿರುವುದು ಕಂಡುಬರುತ್ತಿದೆ. ಅನೇಕ ಮಂದಿ ಮೃತಪಟ್ಟಿದ್ದಾರೆ ಎಂಬ ವರದಿಗಳು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದರ ಜತೆಗೆ ಇನ್ಫ್ಲುಯೆಂಜಾ, ಹ್ಯೂಮನ್ ಮೆಟಾಪ್ನ್ಯೂಮೋವೈರಸ್, ಕೋವಿಡ್-19 ಸೇರಿದಂತೆ ಹಲವಾರು ವೈರಸ್‌ಗಳು ಚೀನಾದಲ್ಲಿ ಹರಡುತ್ತಿವೆ. ವೈರಸ್ ಲಕ್ಷಣಗಳು ಮತ್ತು ಹಿನ್ನಲೆ: ಎಚ್.ಎಂ.ಪಿ.ವಿ. ಹೆಚ್ಚಿನವಾಗಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಕೆಮ್ಮು, ಜ್ವರ, ಶ್ವಾಸಕೋಶ ಸಮಸ್ಯೆ, ಮತ್ತು ಸೀನುವುದು ಈ ವೈರಸ್‌ನ ಪ್ರಮುಖ ಲಕ್ಷಣಗಳಾಗಿವೆ. ಚೀನಾದ ಕೆಲವು ಪ್ರದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂಬ ವರದಿಗಳು ಕೂಡ…
ಯುನೈಟೆಡ್ ಕಿಂಗ್‌ಡಮ್‌ನ ಆಸ್ಪತ್ರೆಗಳಲ್ಲಿ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ದಾಖಲಿಸುತ್ತಿವೆ. ವಿಶೇಷವಾಗಿ ಇನ್ಫ್ಲುಯೆಂಜಾ (Influenza) ಪ್ರಕರಣಗಳ ಹೆಚ್ಚಳ, ಆರೋಗ್ಯ ಇಲಾಖೆಗೆ ತೀವ್ರ ಚಿಂತೆ ಉಂಟುಮಾಡಿದೆ. ಜ್ವರ ಪ್ರಕರಣಗಳು ಈಗಾಗಲೇ ಚಳಿಗಾಲದ ಮಧ್ಯಭಾಗದಲ್ಲಿ ತಲುಪಬೇಕಿದ್ದ ಮಟ್ಟವನ್ನು ಮೀರಿದೆ ಎಂದು ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ (PHE) ತಿಳಿಸಿದೆ. ಜ್ವರ , ಕೋವಿಡ್ ಪ್ರಕರಣಗಳ ಏರಿಕೆಯಿಂದಾಗಿ ಆಸ್ಪತ್ರೆಗಳು ಹೆಚ್ಚಿನ ಆಸ್ಪತ್ರೆಗಳು ರೋಗಿಗಳ ಸಂಖ್ಯೆಯನ್ನು ನಿರ್ವಹಿಸಲು ಪರದಾಡುತ್ತಿವೆ. ಇನ್‌ಫ್ಲುಯೆಂಜಾ ( Influenza )ಮತ್ತು ಕೋವಿಡ್-19, ಉಸಿರಾಟದ ತೊಂದರೆ, ನ್ಯುಮೋನಿಯಾ ಮತ್ತು ಇತರ ವೈರಲ್ ಸೋಂಕುಗಳು ಒಂದೇ ಸಮಯದಲ್ಲಿ ಹರಡುತ್ತಿರುವುದರಿಂದ ಆಸ್ಪತ್ರೆಗಳ ತುರ್ತು ವಿಭಾಗಗಳು ತುಂಬಿ ಹೋಗುತ್ತಿವೆ. ಯುಕೆನ ಆರೋಗ್ಯ ಸೇವಾ ವ್ಯವಸ್ಥೆಯ ಪ್ರಕಾರ, ಇತ್ತೀಚಿನ ವಾರಗಳಲ್ಲಿ ಜ್ವರಕ್ಕೆ ಸಂಬಂಧಿಸಿದ ಆಸ್ಪತ್ರೆ ಪ್ರವೇಶಗಳ ಸಂಖ್ಯೆ 30% ಹೆಚ್ಚು ಏರಿಕೆಯಾಗಿದೆ. ಜ್ವರವು ಮುಖ್ಯವಾಗಿ ವಯೋವೃದ್ಧರು, ಬಾಲಕರು, ಮತ್ತು ಹೃದಯಸಂಬಂಧಿ ಸಮಸ್ಯೆ ಅಥವಾ ಪ್ರತಿ-ರಕ್ಷಣಾ ಶಕ್ತಿ ಕಡಿಮೆ ಇರುವ ವ್ಯಕ್ತಿಗಳನ್ನು ಹೆಚ್ಚು ಭಾದಿಸುತ್ತಿದೆ. ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ತಕ್ಷಣವೇ ಜ್ವರದ ಲಸಿಕೆ ಪಡೆಯುವಂತೆ…
ಲಂಡನ್: ಇಂಗ್ಲೆಂಡಿನಲ್ಲಿ, ವಿಶೇಷವಾಗಿ ಲಂಡನ್‌ನಲ್ಲಿ ಹೆಚ್ಚಿನ ರಿಯಲ್ ಎಸ್ಟೇಟ್ ಈಗ ಭಾರತೀಯರ ಕೈಯಲ್ಲಿದೆ. ಲಂಡನ್‌ಆಧಾರಿತ ಪ್ರಾಪರ್ಟಿ ಡೆವಲಪರ್ ಬಾರೆಟ್ ಇತ್ತೀಚಿನ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ತಲೆಮಾರುಗಳಿಂದ ಯುಕೆಯಲ್ಲಿ ನೆಲೆಸಿರುವ ಭಾರತೀಯ ವಂಶಜರು, ವಿದೇಶಿ ಹೂಡಿಕೆದಾರರು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಉದ್ದೇಶದಿಂದ ಇಂಗ್ಲೆಂಡ್‌ಗೆ ವಲಸೆ ಬಂದಿರುವ ಭಾರತೀಯ ಕುಟುಂಬಗಳು ಲಂಡನ್‌ನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. ಈ ಮಾಹಿತಿಯನ್ನು ಬಾರೆಟ್ ಲಂಡನ್ ಕಳೆದ ವಾರ ಪ್ರಕಟಿಸಿದೆ.ಇದು ಭಾರತೀಯರು ಮತ್ತು ವಿದೇಶಿಗರ ನಡುವೆಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂದಿನ ದಿನಗಳಲ್ಲಿ ಲಂಡನ್ ನಗರದಲ್ಲಿ ಭಾರತೀಯರು ಅತೀ ದೊಡ್ಡ ಪ್ರಾಪರ್ಟಿ ಮಾಲೀಕರು. ಎರಡನೇ ಸ್ಥಾನದಲ್ಲಿ ಇಂಗ್ಲೀಷ್ ಜನರಿದ್ದು, ಮೂರನೇ ಸ್ಥಾನದಲ್ಲಿ ಪಾಕಿಸ್ತಾನಿಗಳು ಇದ್ದಾರೆ. ಭಾರತೀಯರು ಲಂಡನ್‌ನಲ್ಲಿ ಮನೆಗಳನ್ನು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ₹3 ಕೋಟಿ₹4.5 ಕೋಟಿಯವರೆಗೆ ಹೂಡಿಕೆ ಮಾಡುತ್ತಿರುವುದಾಗಿ ವರದಿ ತಿಳಿಸಿದೆ. ಒಮ್ಮೆ ವಿಶ್ವದ ಅರ್ಧದಷ್ಟು ಆಸ್ತಿಯನ್ನು ತಮ್ಮ ಕಾಯಿಲಲ್ಲಿಟ್ಟುಕೊಂಡಿದ್ದ ಇಂಗ್ಲಿಷ್ ಜನರು ಈಗ ಲಂಡನ್‌ನ ಅರ್ಧಕ್ಕಿಂತ ಕಡಿಮೆ ಆಸ್ತಿಯ ಜೊತೆ ಉಳಿದಿದ್ದಾರೆ,” ಎಂದು ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ…
ಯುನೈಟೆಡ್ ಕಿಂಗ್‌ಡಮ್ (ಯುಕೇ) ಸರ್ಕಾರ ಜನವರಿ 2025ರಿಂದ ವೀಸಾ ಪ್ರಕ್ರಿಯೆಗೆ ಹೊಸ ಹಣಕಾಸು ನಿಯಮಗಳನ್ನು ಜಾರಿಗೆ ತರುತ್ತಿದೆ. ಹೊಸ ನಿಯಮಗಳ ಪ್ರಕಾರ, ಲಂಡನ್‌ನಲ್ಲಿ ವಾಸಿಸಲು ವಿದ್ಯಾರ್ಥಿಗಳು ಪ್ರತಿ ತಿಂಗಳು £1,483 (£13,347 ವರ್ಷಕ್ಕೆ) ಮತ್ತು ಲಂಡನ್ ಹೊರಗಡೆ £1,136 (£10,224 ವರ್ಷಕ್ಕೆ) ಈ ಮೊತ್ತವನ್ನು ತೋರಿಸಬೇಕು. ಈ ಮೊತ್ತವನ್ನು ಅರ್ಜಿಯ 28 ದಿನಗಳ ಮುಂಚಿನಿಂದ ಬ್ಯಾಂಕ್ ಖಾತೆಯಲ್ಲಿ ಇರಿಸಬೇಕು. ಸ್ಕಿಲ್ಡ್ ವರ್ಕರ್ ವೀಸಾ ಅರ್ಜಿದಾರರು ಕನಿಷ್ಠ £38,700 ವಾರ್ಷಿಕ ಆದಾಯ ತೋರಿಸಬೇಕು ಮತ್ತು ಅಧಿಕೃತ UK ಉದ್ಯೋಗದಾತರಿಂದ ಸ್ಪಾನ್ಸರ್ ಹೊಂದಿರಬೇಕು. ವೀಸಾ ಶುಲ್ಕಗಳಲ್ಲಿ ಲಘು ಪ್ರಮಾಣದ ಹೆಚ್ಚಳವಾಗಲಿದ್ದು ಆರೋಗ್ಯ, ಸೇನೆ, ಮತ್ತು ವಿಶೇಷ ವಲಯದ ಕೆಲಸಗಾರರಿಗೆ ವಿನಾಯಿತಿ ದೊರೆಯುತ್ತದೆ. ಸತತ 28 ದಿನಗಳವರೆಗೆ ಅರ್ಜಿದಾರರ ಖಾತೆಯಲ್ಲಿ ಹಣ ಉಳಿಯಬೇಕು ಎಂಬ ನಿಬಂಧನೆಗಳು ಅಗತ್ಯವಾಗಿ ಪಾಲಿಸಬೇಕಾಗಿದ್ದು ಈ ಹೊಸ ನಿಯಮಗಳು ಜನವರಿ , 2025 ರಿಂದ ಜಾರಿಗೆ ಬಂದಿವೆ. ಅಧಿಕೃತ ಮಾಹಿತಿಗಾಗಿ ಯುಕೇ ಸರ್ಕಾರದ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.
ಮುಂಬೈ: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದ ಶೌಚಾಲಯದ ಲೈಟ್ ಪ್ಯಾನೆಲ್‌ನಲ್ಲಿ ಬಚ್ಚಿಟ್ಟು 2.10 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕರ್ನಾಟಕದ ಭಟ್ಕಳ ಜಿಲ್ಲೆಯ ಇನಾಮುಲ್ ಹಸನ್ ಎಂಬ ವ್ಯಕ್ತಿಯನ್ನು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯ ವಾಯು ಗುಪ್ತಚರ ಘಟಕವು ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ವಿಮಾನದ ಶೌಚಾಲಯದ ಪ್ಯಾನೆಲ್‌ನಲ್ಲಿ 2.10 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ಮರೆಮಾಚಿಟ್ಟಿದ್ದರು. ವಿಚಾರಣೆ ವೇಳೆ, ಹಸನ್ ಈ ಕೆಲಸ ತಾನು ಚಿನ್ನ ಕಳ್ಳಸಾಗಣೆಯ ಮಾಫಿಯಾ ಪರವಾಗಿ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಚಿನ್ನವನ್ನು ಅಡಗಿಸಿದ ಬಳಿಕ ಅದರ ಫೋಟೋ ಮಾಫಿಯಾ ಸಂಘಕ್ಕೆ ಕಳಿಸಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ಈ ಪ್ರಕರಣವನ್ನು ಆಳವಾಗಿ ಪರಿಶೀಲಿಸುತ್ತಿದ್ದು, ಮಾಫಿಯಾದ ಇತರ ಸದಸ್ಯರ ಮೇಲೆ ನಿಗಾ ಇಟ್ಟಿದ್ದಾರೆ.
ಮೆಟ್ ಆಫೀಸ್ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೇಲ್ಸ್‌ನ ಕೆಲವು ಭಾಗಗಳಿಗೆ ಮೂರು ದಿನಗಳ ತೀವ್ರ ಹಿಮಪಾತ ಎಚ್ಚರಿಕೆಯನ್ನು ಜಾರಿ ಮಾಡಿದೆ. ಶನಿವಾರ ಮಧ್ಯಾಹ್ನದಿಂದ ಸೋಮವಾರ ಬೆಳಿಗ್ಗೆವರೆಗೆ ಹಿಮಪಾತದಿಂದಾಗಿ ಸಂಚಾರದಲ್ಲಿ ರೈಲು ಸಂಚಾರದಲ್ಲಿ ವಿಳಂಬ, ಶಾಲೆಗಳ ಮುಚ್ಚುವಿಕೆ, ಮತ್ತು ಗ್ರಾಮೀಣ ಪ್ರದೇಶಗಳು, ವಿದ್ಯುತ್ ಸರಬರಾಜು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರ ತಾಪಮಾನ ಶೂನ್ಯಕ್ಕಿಂತ ಕೆಳಗೆ ಇಳಿಯುವ ನಿರೀಕ್ಷೆಯಿದೆ. Greater Manchester, Peaklover, Stalybridge, Stockport, Wigan ಮತ್ತು Didsbury ಪ್ರದೇಶಗಳಲ್ಲಿ ನಿನ್ನೆ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ. ರಕ್ಷಣಾ ತಂಡಗಳು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕಾರ್ಯನಿರ್ವಹಿಸುತ್ತಿವೆ.
ಲಂಡನ್‌ನ ಬಾಂಡ್ ಸ್ಟ್ರೀಟ್‌ನ ಹಾಲ್ಸಿಯಾನ್ ಗ್ಯಾಲರಿಯ ಕಲಾಸಂಗ್ರಾಹಕಿ ಹಾಗೂ ಪ್ರಖ್ಯಾತ instagram ಇನ್‌ಫ್ಲುಯೆನ್ಸರ್ ಶಫಿರಾ ಹುವಾಂಗ್ ಅವರ ಮನೆಗೆ ದರೋಡೆಕೋರರು ನುಗ್ಗಿ, ಸುಮಾರು 12.4 ಮಿಲಿಯನ್ ಪೌಂಡ್ ಮೌಲ್ಯದ ಅಮೂಲ್ಯ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ದರೋಡೆಯಲ್ಲಿ 160,000 ಪೌಂಡ್ ಮೌಲ್ಯದ ಹರ್ಮೆಸ್ ಕ್ರೋಕೋಡೈಲ್ ಕೆಲ್ಲಿ (Hermes Crocodile Kelly ) ಹ್ಯಾಂಡ್‌ಬ್ಯಾಗ್, 15,000 ಪೌಂಡ್ ನಗದು ಹಾಗೂ 10 .4 ಮಿಲಿಯನ್ ಪೌಂಡ್ ಮೌಲ್ಯದ ವಿಶಿಷ್ಟ ವಿನ್ಯಾಸದ ಆಭರಣಗಳನ್ನು ಕಳವು ಮಾಡಲಾಗಿದೆ . ಕಳವುಗೊಂಡಿರುವ ಆಭರಣಗಳಲ್ಲಿ ಡಿ ಬಿಯರ್ಸ್ ಬಟರ್ಫ್ಲೈ (De Beers ) ಡೈಮಂಡ್ ರಿಂಗ್‌ಗಳು, ಕ್ಯಾಥರೀನ್ ವಾಂಗ್ (Katherine Wang ) ಅವರ ಪಿಂಕ್ ಸಫೈರ್ ಈರಿಂಗ್‌ಗಳು ಹಾಗೂ ವ್ಯಾನ್ ಕ್ಲೀಫ್‌ನ ( Van Cleef & Arpels) ಚಿನ್ನ, ವಜ್ರ ಮತ್ತು ಸಫೈರ್ ನೆಕ್ಲೇಸ್‌ಗಳು ಸೇರಿವೆ. ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು ದರೋಡೆಕೋರನು ಎರಡನೇ ಮಹಡಿಯ ಕಿಟಕಿಯ ಮೂಲಕ ಮನೆಗೆ ನುಗ್ಗಿದ್ದಾನೆ. ದರೋಡೆಕೋರನು ಮುಖವಾಡ ಧರಿಸಿದ್ದು 20ರಿಂದ 30ರ…
ಭಾರತದ ಮುಖ್ಯಮಂತ್ರಿಗಳ ಆಸ್ತಿ-ಪಾಸ್ತಿಗಳ ಕುರಿತು ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ಅಧ್ಯಯನವು ದೇಶದ ರಾಜಕೀಯ ನಾಯಕರ ಆರ್ಥಿಕ ಸ್ಥಿತಿಯಲ್ಲಿ ಅನೇಕ ವಿಭಿನ್ನತೆಯನ್ನು ತೋರಿಸಿದೆ. ಮುಖ್ಯಮಂತ್ರಿಗಳ ಘೋಷಿತ ಆಸ್ತಿ, ಸಾಲದ ವಿವರಗಳು ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಪ್ರಮಾಣಪತ್ರಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ. ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರಿಫಾರ್ಮ್ಸ್ (ADR) ವರದಿಯ ಪ್ರಕಾರ, ₹15.38 ಲಕ್ಷ ಮೌಲ್ಯದ ಆಸ್ತಿ ಹೊಂದಿರುವ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಭಾರತದಲ್ಲಿ ಅತ್ಯಂತ ‘ಬಡ’ ಮುಖ್ಯಮಂತ್ರಿಯೆಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಅವರ ಒಟ್ಟು ಘೋಷಿತ ಆಸ್ತಿ ₹55 ಲಕ್ಷ, ಮತ್ತು ಕೇರಳದ ಪಿಣರಾಯಿ ವಿಜಯನ್ ಅವರ ಘೋಷಿತ ಆಸ್ತಿ ₹1.18 ಕೋಟಿ. ಈ ಇಬ್ಬರು ಕ್ರಮವಾಗಿ ಎರಡನೇ ಮತ್ತು ಮೂರನೇ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳಾಗಿದ್ದಾರೆ. ಹೆಚ್ಚಿನ ಆಸ್ತಿಯ ಮುಖ್ಯಮಂತ್ರಿಗಳು: ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ₹931 ಕೋಟಿ ಮೌಲ್ಯದ ಆಸ್ತಿಗಳೊಂದಿಗೆ ದೇಶದ ಅತ್ಯಂತ ಶ್ರಿಮಂತ ಮುಖ್ಯಮಂತ್ರಿಯಾಗಿ…
ಆಸ್ಟ್ರೇಲಿಯಾ ಸರ್ಕಾರವು ಭಾರತೀಯ ಯುವ ಉದ್ಯೋಗಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಲು ಮೇಟ್ಸ್ (Mobility Arrangement for Talented Early-professionals Scheme – MATES) ವೀಸಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ 2024ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಿದ್ದು ಜನವರಿ 07 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಪ್ರತಿ ವರ್ಷ 3,000 ಭಾರತೀಯ ಯುವ ಉದ್ಯೋಗಿಗಳಿಗೆ ಆಸ್ಟ್ರೇಲಿಯಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ. ಮೇಟ್ಸ್ ವೀಸಾದ ಮುಖ್ಯ ಅರ್ಹತಾ ಮಾನದಂಡಗಳುವಯೋಮಿತಿ: 18 ರಿಂದ 30 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬಹುದು.ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಹೆಚ್ಚಿನ ವಿದ್ಯಾರ್ಹತೆ ಪಡೆದಿರಬೇಕು.ಈ ವೀಸಾ Renewable energy,Agriculture, Information and communication technology (ICT), Engineering, Health, Education,Financial technology, Artificial intelligence, Mining ಯಾವುದಾದರು ಕ್ಷೇತ್ರಗಳಲ್ಲಿ ಪದವಿ ಪಡೆದಿರಬೇಕು.ಭಾಷಾ ಪರಿಣಿತಿ: ಅರ್ಜಿದಾರರು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು. IELTS ಪರೀಕ್ಷೆಯಲ್ಲಿ ಒಟ್ಟು 6 ಅಂಕಗಳು ಮತ್ತು ಪ್ರತಿ ವಿಭಾಗದಲ್ಲಿ ಕನಿಷ್ಠ…
Services
- About Us
- ಯುಕೆಕನ್ನಡಿಗ.ಕಂ ನ್ಯೂಸ್ ಚಾನೆಲ್ ಕನ್ನಡ ಮಾತನಾಡುವ ಸಮುದಾಯಕ್ಕಾಗಿ ವಿಶಿಷ್ಟವಾದ ಮಾಧ್ಯಮ ವೇದಿಕೆಯಾಗಿದ್ದು, ಯುನೈಟೆಡ್ ಕಿಂಗ್‌ಡಮ್ ಮತ್ತು ಕರ್ನಾಟಕದ ನಡುವೆ ಸಂಪರ್ಕವನ್ನು ಸ್ಥಾಪಿಸಲು ಮಾಧ್ಯಮವಾಗಿದೆ. ನಾವು ಯುಕೆಯಲ್ಲಿ ನಡೆಯುವ ಪ್ರಮುಖ ಘಟನೆಗಳು, ಕನ್ನಡ ಸಾಂಸ್ಕೃತಿಕ ಹಬ್ಬಗಳು, ಕರ್ನಾಟಕದ ತಾಜಾ ಸುದ್ದಿ ಮತ್ತು ಕನ್ನಡಿಗರ ಸಾಧನೆಗಳನ್ನು ಹಂಚುವ ವೇದಿಕೆಯಾಗಿದೆ. ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ. reachukkannadiga@gmail.com
- Contact Us
- Privacy Policy